ರಾಜಕೀಯ ಸುದ್ದಿ

ನಾಳೆ ಬೆಳಗ್ಗೆ 11 ಗಂಟೆಗೆ ದಳಪತಿ ವಿಜಯ್ ಗೆ ಸಿಎಂ ಪಟ್ಟ !

Share It

ಬೆಂಗಳೂರು: 108 ಸ್ಥಾನ ಗಳಿಸುವ ಮೂಲಕ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿರುವ ನಟ ವಿಜಯ್ ನಾಳೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ನೆನ್ನೆಯೇ ಅವರು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿಯಿತ್ತು. ಆದರೆ, ಗವರ್ನರ್ ಸಂಖ್ಯಾಬಲದ ವಿಚಾರದಲ್ಲಿ ತೆಗೆದ ತಗಾದೆಯಿಂದಾಗಿ, ಅವರು ಅಧಿಕಾರ ಸ್ವೀಕಾರ ಮಾಡುವುದು ತಡವಾಗಿತ್ತು.

ಇಂದು ಸಂಜೆ 125 ಶಾಸಕರ ಬೆಂಬಲದ ಸಹಿಯೊಂದಿಗೆ ವಿಜಯ್ ರಾಜ್ಯಪಾಲರನ್ನು ಭೇಟಿ ಮಾಡಿದರು. ಅನಂತರ ಅವರಿಗೆ ತಮಗಿರುವ ಸಂಖ್ಯಾಬಲದ ಮಾಹಿತಿಯನ್ನು ನೀಡಿ, ನಾಳೆ ಅಧಿಕಾರ ಸ್ವೀಕಾರ ಮಾಡಲು ಅನುಕೂಲ ಮಾಡಿಕೊಂಡುವಂತೆ ಮನವಿ ಮಾಡಿಕೊಂಡರು.

ವಿಜಯ್ ಮನವಿಗೆ ರಾಜ್ಯಪಾಲರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆ ಅಂದರೆ ಶನಿವಾರ ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳ ಪಾಲಿನ ದಳಪತಿ ವಿಜಯ್ ತಮ್ಮ ಸರ್ಕಾರವನ್ನು ರಚನೆ ಮಾಡಲಿದ್ದಾರೆ. ಆ ಮೂಲಕ ತಮಿಳುನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ.


Share It

You cannot copy content of this page