ಬೆಂಗಳೂರು: ಬೆಂಗಳೂರುದಿಂದ ಬೀದರ್‌ವರೆಗೆ ಸಂಚರಿಸುವ ರೈಲುಗಳಲ್ಲಿ ಜನರಲ್ ಬೋಗಿಗಳ ದುಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಸಾವಿರಾರು ಪ್ರಯಾಣಿಕರು ಈ ಮಾರ್ಗವನ್ನು ಅವಲಂಬಿಸಿದ್ದರೂ, ಬೋಗಿಗಳ ಕೊರತೆ ಮತ್ತು ಅತಿಯಾದ ಜನಸಂದಣಿ ಕಾರಣದಿಂದ ಪ್ರಯಾಣವೇ ಯಾತನೆ ಆಗಿದೆ.
ಪ್ರಯಾಣಿಕರು ಟಿಕೆಟ್ ಪಡೆದರೂ ಬೋಗಿಯೊಳಗೆ ಪ್ರವೇಶಿಸಲು ಸಾಧ್ಯವಾಗದೇ, ಬಾಗಿಲು ಬಳಿ ನಿಂತುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ಉಂಟಾಗಿದೆ. ಮಹಿಳೆಯರು ಮತ್ತು ಹಿರಿಯ ನಾಗರಿಕರು ಹೆಚ್ಚಿನ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಈ ಕುರಿತು ಪ್ರಯಾಣಿಕರು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿ, ಹೆಚ್ಚುವರಿ ಜನರಲ್ ಬೋಗಿಗಳು
ವಿಶೇಷ ರೈಲುಗಳ ವ್ಯವಸ್ಥೆ ಭದ್ರತಾ ಕ್ರಮಗಳು ಅಮಲಿನಲ್ಲಿ ತರಲು ಆಗ್ರಹಿಸಿದ್ದಾರೆ.
ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.

