ಬೆಂಗಳೂರು: ಜಿಎಸ್ಟಿ ಸೇರಿದಂತೆ ವಿವಿಧ ಅನುದಾನಗಳನ್ನು ನೀಡುವಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿರುವುದರ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳ ವಿರೋಧ ಮುಂದುವರಿದಿದೆ.
ಇದೀಗ ತಮಿಳುನಾಡು ಸರಕಾರ ಕೇಂದ್ರ ಸರಕಾರದಿಂದಪ್ರಕೃತಿ ವಿಕೋಪ ಪರಿಹಾರ ವಿತರಣೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಸುಪ್ರೀಂ ಕೋಟರ್್ನಲ್ಲಿ ದೂರು ದಾಖಲಿಸಲಾಗಿದೆ. ಈ ಹಿಂದೆ ಕನರ್ಾಟಕಕ್ಕೆ ಜಿಎಸ್ಟಿ ಅನುದಾನದಲ್ಲಿ ಅನ್ಯಾಯ, ಬರ ಪರಿಹಾರದಲ್ಲಿ ತಾರತಮ್ಯ ಸೇರಿದಂತೆ ವಿವಿಧ ತೆರಿಗೆ ಅನ್ಯಾಯವನ್ನು ಖಂಡಿಸಿ, ರಾಜ್ಯದ ಕಾಂಗ್ರೆಸ್ ಸಂಸದರು ಮತ್ತು ನಾಯಕರು ಪ್ರತಿಭಟನೆ ನಡೆಸಿದ್ದರು.
ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜತೆಗೆ ಸುಪ್ರೀಂ ಕೋಟರ್್ನಲ್ಲಿ ದೂರು ದಾಖಲು ಮಾಡುವ ಮೂಲಕ ಕೇಂದ್ರ ಸರಕಾರವನ್ನು ಮುಜುಗರಕ್ಕೀಡು ಮಾಡುವ ಕ್ರಮವನ್ನು ಅನುಸರಿಸಲಾಗಿತ್ತು. ಇದೇ ಕ್ರಮವನ್ನು ಇದೀಗ ಅನುಸರಿಸಿರುವ ತಮಿಳುನಾಡು ಸರಕಾರ ತಾನು ಕೂಡ ಸುಪ್ರೀಂ ಕೋಟರ್್ ಮೊರೆ ಹೋಗಿದೆ.
ಹಣಕಾಸು ಆಯೋಗದ ಶಿಫಾರಸಿನ ನಡುವೆಯೂ ಕೇಂದ್ರ ಸರಕಾರ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕನರ್ಾಟಕ, ಆಂದ್ರ ಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳಿಗೆ ಅನುದಾನ ವಿತರಣೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ. ಉತ್ತರದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಶೇಕಡವಾರು ತೆರಿಗೆ ಅನುದಾನ ವಾಪಸ್ ನೀಡುವಲ್ಲಿ ಅನ್ಯಾಯವಾಗುತ್ತಿದೆ. ಈ ಅನ್ಯಾಯದ ವಿರುದ್ಧ ಇತ್ತೀಚೆಗೆ ಹೋರಾಟಗಳು ಹೆಚ್ಚಾಗುತ್ತಿದ್ದು. ಇದೀಗ ತಮಿಳು ನಾಡಿನ ಕ್ರಮ ಗಮನ ಸೆಳೆದಿದೆ.