ಅಮರಾವತಿ: 80 ವರ್ಷದ ವಯೋವೃದ್ಧನಿಗೆ ತನ್ನ ಮಕ್ಕಳು ಮತ್ತು ಮೊಮ್ಮಕ್ಕಲೇ ಸೇರಿ ಮೂರನೇ ಮದುವೆ ಮಾಡಿಸಿರುವ ಅಪರೂಪದ ಘಟನೆ ನಹಾರಾಷ್ಟçದಲ್ಲಿ ನಡೆದಿದೆ.
ಅಂಜನ್‌ಗಾವ್ ಸುರ್ಜಿ ಇಲ್ಲಿಯ ಚಿಂಚೋಳಿ ರಹಿಮಾಪುರ ಎಂಬಲ್ಲಿ 80 ವರ್ಷದ ವಿಠ್ಠಲ್ ಖಂಡಾರೆ 65 ವರ್ಷದ ಇಂದುಬಾಯಿ ದಾಬಡೆ ವಿಹಾಹ ಅದ್ದೂರಿಯಾಗಿ ಜರುಗಿದೆ. ರಹಿಮಾಪುರದಲ್ಲಿ ವಾಸವಾಗಿರುವ ವಿಠ್ಠಲ್ ರಾವ್ ಅವರು ಈ ಹಿಂದೆ ಎರಡು ಬಾರಿ ಮದುವೆಯಾಗಿದ್ದು, ಇದು ಅವರ ಮೂರನೇ ವಿವಾಹವಾಗಿದೆ.
ವಿಠ್ಠಲರಾವ್ ಅವರ ಎರಡನೇ ಪತ್ನಿ ಮೂರ್ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರಿಂದ ತಮಗೆ ಒಂಟಿತನ ಕಾಡುತ್ತಿದೆ ಎಂದು ಮೊಮ್ಮಕ್ಕಳ ಮುಂದೆ ಬೇಸರ ವ್ಯಕ್ತಪಡಿಸಿ ಮತ್ತೊಂದು ಮದುವೆ ಆಗುವ ಬಯಕೆ ವ್ಯಕ್ತಪಡಿಸಿದ್ದರು. ಇದಕ್ಕೆ ಹಲವರು ವಿರೋಧಿಸಿದರೂ, ಮಗ ಮತ್ತು ಸೊಸೆ ಒಪ್ಪಿಗೆ ಸೂಚಿಸಿದರು.
ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿ, ವಧುವನ್ನು ಹೊಂದಿಸಿ ಮದುವೆ ನಿಶ್ಚಯ ಮಾಡಿದರು. ೬೫ ವರ್ಷದ ಇಂದುಬಾಯಿ ಮದುವೆ ಒಪ್ಪಿದ ಕಾರಣ ಅವರೊಂದಿಗೆ ಮದುವೆ ನಡೆಯಿತು. ಮದುವೆಗೆ ಗ್ರಾಮಸ್ಥರು ಸೇರಿ, ನೆಂಟರಿಷ್ಟರಿಗೆಲ್ಲ ಆಹ್ವಾನ ನೀಡಲಾಗಿತ್ತು. ಈ ಮದುವೆ ಸಮಾರಂಭದಲ್ಲಿ ಗ್ರಾಮದ ಜನತೆ ಭಾಗವಹಿಸಿ ಅದ್ಧೂರಿಯಾಗಿ ಮದುವೆ ನೆರವೇರಿಸಿದರು.
ಅಜ್ಜನ ಮದುವೆಯನ್ನು ಗ್ರಾಮದ ಹೆಣ್ಣು ಸಿಗದೆ, ಮದುವೆಗಾಗಿ ಕಾಯುತ್ತಿರುವ ಯುವಕರು ತಮಾಷೆಯಾಗಿ ನೋಡುತ್ತಿದ್ದರು. ನಮಗೆ ಹೆಣ್ಣು ಹುಡುಕುವುದೇ ಕಷ್ಟವಾಗುತ್ತಿದೆ. ಅಂತಹದ್ದರಲ್ಲಿ, ತಾತನಿಗೆ ಮೂರನೇ ಮದುವೆ ಆಗುತ್ತಿದೆ. ತಾತನ ಅದೃಷ್ಟವೇ ಅದೃಷ್ಟ ಎಂದು ತಮ್ಮತಮ್ಮಲ್ಲೇ ತಮಾಷೆ ಮಾಡಿಕೊಳ್ಳುತ್ತಿದ್ದರು.