ಅಪರಾಧ ಸುದ್ದಿ

ನೆಲಮಂಗಲ ಪೊಲೀಸರ ಸಮಯಪ್ರಜ್ಞೆ: ಇಬ್ಬರು ಗಾಯಾಳುಗಳು ಪ್ರಾಣಾಪಾಯದಿಂದ ಪಾರು

Share It

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ನೆಲಮಂಗಲ ಪೊಲೀಸರು ಸಮಯಪ್ರಜ್ಷೆ ಮೆರೆದು ಇಬ್ಬರು ಗಾಯಾಳುಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಡಾಬಸ್‌ಪೇಟೆಯ ರಾಯರಪಾಳ್ಯ ಗೇಟ್ ಬಳಿ ಕಾರು ಅಪಘಾತವಾಗಿ ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಬರುವುದು ತಡವಾಗಿತ್ತು. ಆ ಸಂದರ್ಭದಲ್ಲಿ ಹೆದ್ದಾರಿ ಗಸ್ತಿನಲ್ಲಿದ್ದ ಎಆರ್ ಎಸ್‌ಐ ವಿಜಯ್ ಕುಮಾರ್ ಮತ್ತು ಎಎಚ್‌ಸಿ ಸತೀಶ್ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಆಂಬ್ಯುಲೆನ್ಸ್ ಬರದಿದ್ದ ಕಾರಣಕ್ಕೆ ಬೇರೆ ವಾಹನದಲ್ಲಿ ಡಾಬಸ್‌ಪೇಟೆ ಸರಕಾರಿ ಆಸ್ಪತ್ರೆಗೆ ಸಾಗಿಸಿ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಕೊಡಿಸಿದ ಕಾರಣ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರ ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯನ್ನು ಬೆಂಗಳೂರು ಗ್ರಾಮಾಂತರ ಎಸ್‌ಪಿ ಶ್ಲಾಘಿಸಿದ್ದಾರೆ. ಆಂಬ್ಯುಲೆನ್ಸ್ ಕಾಯದೆ ಆಸ್ಪತ್ರೆಗೆ ಸಾಗಿಸುವಲ್ಲಿ ಪೊಲೀಸರು ತೋರಿದ ಕಾಳಜಿಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.


Share It

You cannot copy content of this page