ಉಪಯುಕ್ತ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ KSRTC ವಿಡಿಯೋ: ಎಡಿಟ್ ಮಾಡಿದವರಿಗೆ ಸಾರಿಗೆ ಸಚಿವರ ಮೆಚ್ಚುಗೆ

Share It

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೆಎಸ್‌ಆರ್‌ಟಿಸಿಯ ಮೊದಲ ಬಸ್‌ನಿಂದ ಹಿಡಿದ ಪ್ರಸ್ತುತ ಇರುವ ಐರಾವತದವರೆಗಿನ ಎಲಿವೇಷನ್ ಬಗ್ಗೆ ಮಾಡಿರುವ ವಿಡಿಯೋಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಎಸ್‌ಆರ್‌ಟಿಸಿ ಹಳೆಯ ಬಸ್ ಬರುಬರುತ್ತಾ ಅದೇಗೆ ಅಪ್ಡೇಟ್ ಆಗುತ್ತಾ ಬಂದಿದೆ ಎಂಬ ಕುರಿತು ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋಗೆ ಸಾವಿರಾರು ಲೈಕ್ಸ್ ಮತ್ತು ಕಮೆಂಟ್ಸ್ಗಳು ಬಂದಿವೆ.

ಕೆಎಸ್‌ಆರ್‌ಟಿಸಿ ಕರ್ನಾಟಕದ ಹೆಮ್ಮೆ ಎಂಬAತೆ ಅನೇಕ ಕನ್ನಡಿಗರು ಕೊಂಡಾಡಿದ್ದಾರೆ. ಈ ವಿಡಿಯೋ ಅತ್ಯುತ್ತಮ ಮೆಚ್ಚಿಗೆಯನ್ನು ಗಳಿಸಿಕೊಂಡಿದ್ದು, ಇದನ್ನು ಗಮನಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಡಿಯೋ ಎಡಿಟ್ ಮಾಡಿದ ವ್ಯಕ್ತಿಗೆ ಮೆಚ್ಚುಗೆ ಸೂಚಿಸಿ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ದೇಶದ ಅತ್ಯಂತ ಶ್ರೇಷ್ಠ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದ್ದು, ಕಾಲಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿದೆ. ಈ ಕುರಿತು ಬೇರೆ ಸಾರಿಗೆ ಸಂಸ್ಥೆಗಳು ಕೆಎಸ್‌ಆರ್‌ಟಿಸಿಯ ಕಾರ್ಯವೈಖರಿಯನ್ನು ಅನುಕರಿಸುತ್ತಿವೆ.

ನೆಟ್ಟಿಗರು ಕೂಡ ಕೆಎಸ್‌ಆರ್‌ಟಿಸಿ ಬಸ್‌ಗಳು, ವೇಗ ಮತ್ತು ಸುಸಜ್ಜಿತ ವ್ಯವಸ್ಥೆಯ ಕುರಿತು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಡುತ್ತಾರೆ. ಇದೀಗ ಕೆಎಸ್‌ಆರ್‌ಟಿಸಿಯ ಬಸ್‌ನ ಎಲಿವೇಷನ್ ಕುರಿತು ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಸಚಿವರು ಮೆಚ್ಚುಗೆ ಸೂಚಿಸಿದ್ದಾರೆ.


Share It

You cannot copy content of this page