ಬೆಂಗಳೂರು: ಮುಟ್ಟಿನ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುವ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಪಂಜಾಬ್ ವಿಶ್ವವಿದ್ಯಾನಿಲಯ ಆ ವೇಳೆ ರಜೆ ನೀಡಲು ತೀರ್ಮಾನಿಸಿದೆ.
ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದ (ಪಿಯು) ಮಹಿಳಾ ವಿದ್ಯಾರ್ಥಿನಿಯರು ಮುಟ್ಟಿನ ಸಮಯದ ವೇಳೆ ರಜೆಯನ್ನು ಪಡೆಯಬಹುದು ಎಂದು ಘೋಷಿಸಿದೆ. ಹೀಗೆ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ನೀಡುವ ಮೂಲಕ ದೇಶದ ಮೊದಲ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ.
ಪಂಜಾಬ್ ವಿಶ್ವವಿದ್ಯಾನಿಲಯದ ಉಪಕುಲಪತಿ ರೇಣು ವಿಗ್ ಅವರು ಈ ಮುಟ್ಟಿನ ಪ್ರಸ್ತಾವನೆಗೆ ಸಮ್ಮತಿಸಿದ್ದಾರೆ. ಮುಂಬರುವ 2024-25ರ ಶೈಕ್ಷಣಿಕ ಸೆಮಿಸ್ಟರ್ಗಳಲ್ಲಿ ರಜೆಗಳನ್ನು ಜಾರಿಗೊಳಿಸಲಾಗುತ್ತದೆ. ಈ ಬಗ್ಗೆ ವಿಶ್ವವಿದ್ಯಾನಿಲಯದ ಸೂಚನಾ ಡೀನ್ ಆಗಿರೋ ರುಮಿನಾ ಸೇಥಿ ಅವರು ಏಪ್ರಿಲ್ 10ರಂದು ಸುತ್ತೋಲೆ ಹೊರಡಿಸಿದ್ದಾರೆ.
ಮುಟ್ಟಿನ ರಜೆ ಪಡೆಯಲು ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಹಾಕಲಾಗಿದೆ. ವಿದ್ಯಾಥರ್ಿಗಳು ಕನಿಷ್ಠ 15 ದಿನಗಳ ಕಾಲ ಕ್ಲಾಸ್ ನಡೆಯುವ ಕ್ಯಾಲೆಂಡರ್ ತಿಂಗಳಿಗೆ ಒಂದು ದಿನ ರಜೆ ತೆಗೆದುಕೊಳ್ಳಬಹುದು. ಇದಲ್ಲದೆ, ವಿದ್ಯಾಥರ್ಿಗಳು ಪ್ರತಿ ಸೆಮಿಸ್ಟರ್ಗೆ ಗರಿಷ್ಠ ನಾಲ್ಕು ರಜೆಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ರಜೆ ಪಡೆಯಲು ವಿದ್ಯಾಥರ್ಿಗಳು ಕಚೇರಿಯಲ್ಲಿ ಫಾಮರ್್ ಅನ್ನು ಭತರ್ಿ ಮಾಡಬೇಕಾಗುತ್ತದೆ.
ಇದಲ್ಲದೆ, ರಜೆ ಪಡೆಯಲು ಸಂಬಂಧಿಸಿದ ಡಿಪಾಟರ್್ಮೆಂಟ್ನ ಅಧ್ಯಕ್ಷರು ಅಥವಾ ನಿದರ್ೇಶಕರು ಅನುಮತಿ ನೀಡಬಹುದು. ವಿದ್ಯಾಥರ್ಿ ಸ್ವಯಂಧೃಡೀಕರಣದ ಆಧಾರದ ಮೇಲೆರಜೆ ನೀಡಲಾಗುತ್ತದೆ. ಆ ಮೂಲಕ ಪಂಜಾಬ್ ಯೂನಿವಸರ್ಿಟಿ ದೇಶದ ಮಾದರಿ ವಿವಿಯಾಗಲಿದೆ.