ಬೆಂಗಳೂರು: ಆನ್ಲೈನ್ನಲ್ಲಿ ಖರೀದಿಸಿದ್ದ ಶೂಗಳನ್ನು ಸರಿಯಾದ ಸಮಯದಲ್ಲಿ ತಲುಪಿಸದ ಶೂ ಕಂಪನಿ ಗ್ರಾಹಕನಿಗೆ 3 ಸಾವಿರ ರು. ಪರಿಹಾರ ನೀಡಬೇಕು ಎಂದು ಗ್ರಾಹಕರ ಪರಿಹಾರ ವೇದಿಕೆ ನಿದರ್ೇಶನ ನೀಡಿದೆ.
ಬೆಂಗಳೂರು ನಗರದ ಕೆಂಗೇರಿ ನಿವಾಸಿ ಸ್ಮಿತಾ ಮೋಹನ್ 2023 ರ ಮೇ ತಿಂಗಳಲ್ಲಿ ವುಡ್ಲ್ಯಾಂಡ್ ಕಂಪೆನಿಯ ಬೂಟುಗಳನ್ನು ಆನ್ಲೈನ್ ಮೂಲಕ 6,995 ರೂ. ಪಾವತಿಸಿ ಖರೀದಿಸಿದ್ದರು. ಹಲವು ದಿನಗಳು ಕಳೆದರೂ ಗ್ರಾಹಕರಿಗೆ ತಾವು ಖರೀದಿಸಿದ್ದ ಬೂಟುಗಳು ತಲುಪಿರಲಿಲ್ಲ.
ಹಲವು ಬಾರಿ ಸಂಸ್ಥೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಲೀಗಲ್ ನೋಟಿಸ್ ಜಾರಿ ಮಾಡಿದರೂ ಫಲ ನೀಡಲಿಲ್ಲ. ಇದರಿಂದ ಬೇಸತ್ತ ದೂರುದಾರರು, ಗ್ರಾಹಕರ ಪರಿಹಾರ ವೇದಿಕೆಗೆ ದೂರು ನೀಡಿ 50 ಸಾವಿರ ರೂ ಪರಿಹಾರ ಕೊಡಿಸಬೇಕು ಎಂದು ಕೋರಿದ್ದರು.
ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರದ 2ನೇ ಹೆಚ್ಚುವರಿ ಗ್ರಾಹಕರ ಪರಿಹಾರ ವೇದಿಕೆ ನ್ಯಾಯಾಧೀಶ ವಿಜಯ್ ಕುಮಾರ್ ಎಂ.ಪಾವ್ಲೆ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ಮಾಡಿತು. ಗ್ರಾಹಕರ ಪರಿಹಾರ ವೇದಿಕೆ, ಪ್ರತಿವಾದಿ ಕಂಪನಿಗೆ ನೋಟಿಸ್ ಜಾರಿ ಮಾಡಿತ್ತು. ಆದರೂ, ಪ್ರತಿವಾದಿ ಕಂಪೆನಿ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಇದರಿಂದಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ ಆದೇಶ ನೀಡಿದೆ. ಆದೇಶದಲ್ಲಿ ಗ್ರಾಹಕರು ಈಗಾಗಲೇ ಪಾವತಿ ಮಾಡಿದ್ದ 6,995 ರೂ.ಗಳನ್ನು ಹಿಂತಿರುಗಿಸಬೇಕು. 2 ಸಾವಿರ ರೂ. ಪರಿಹಾರ ಮತ್ತು 1 ಸಾವಿರ ರೂ. ನ್ಯಾಯಾಂಗ ಹೋರಾಟದ ವೆಚ್ಚವಾಗಿ ಪಾವತಿ ಮಾಡಬೇಕು. ಮುಂದಿನ 45 ದಿನಗಳಲ್ಲಿ ಪಾವತಿಸಬೇಕು ಎಂದು ಪೀಠ ಆದೇಶಿಸಿತು.