ರಾಜಕೀಯ ಸುದ್ದಿ

5 ನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಅಧಿಕಾರ ಸ್ವೀಕಾರ

Share It

ಮಾಸ್ಕೋ: ಉಕ್ರೇನ್ ಯುದ್ದದ ಮೂಲಕ ವಿಶ್ವ ಸಮುದಾಯವನ್ನು ಎದುರುಹಾಕಿಕೊಂಡಿದ್ದರೂ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಐದನೇ ಬಾರಿಗೆ ಅಧ್ಯಕ್ಷರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಉಕ್ರೇನ್ ಯುದ್ಧದ ನಂತರ, ಪಾಶ್ಚಿಮಾತ್ಯ ರಾಷ್ಟ್ರಗಳಿಂದ ನಿರ್ಬಂಧ, ವ್ಯಾಪಾರ ಒಪ್ಪಂದಕ್ಕೆ ಹೊಡೆತ. ಇದೆಲ್ಲ ಬೆಳವಣಿಗೆಗಳು ನಡೆದಿದ್ದವು. ಇದರ ನಡುವೆಯೂ ಅವರು ಐದನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮಾರ್ಚ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಭರ್ಜರಿ ಗೆಲುವು ಸಾಧಿಸಿದ್ದರು. ಚಲಾವಣೆಯಾದ ಮತದಾನದಲ್ಲಿ ಪುಟಿನ್ ಶೇಕಡಾ 87.17 ರಷ್ಟು ಮತಗಳನ್ನು ಪಡೆದು ಏಕಪಕ್ಷೀಯವಾಗಿ ಆಯ್ಕೆಯಾಗಿದ್ದರು.

ಇವರ ಎದುರಾಳಿಯಾಗಿದ್ದ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ನಿಕೊಲಾಯ್ ಖರಿಟೋನೊವ್ ಅವರು ಶೇ. ೪.೧ ರಷ್ಟು ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ನ್ಯೂ ಪೀಪಲ್ ಪಕ್ಷದ ಅಭ್ಯರ್ಥಿ ವ್ಲಾಡಿಸ್ಲಾವ್ ದಾವಂಕೋವ್ ಶೇಕಡಾ ೪ ರಷ್ಟು ಮತಗಳೊಂದಿಗೆ ಮೂರನೇ ಸ್ಥಾನಿಯಾಗಿದ್ದಾರೆ.

ರಷ್ಯಾದ ಪ್ರಭಾವಿ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು. ಈ ಹಿಂದೆ ಅಧ್ಯಕ್ಷರ ಅಧಿಕಾರವಧಿ 4 ವರ್ಷಗಳಿದ್ದವು. ಇದಕ್ಕೆ ತಿದ್ದುಪಡಿ ತರಲಾಗಿದ್ದು, ಈಗ ಅದು 6 ವರ್ಷಕ್ಕೆ ಹೆಚ್ಚಿಸಲಾಗಿದೆ.

ಅಧ್ಯಕ್ಷರ ೬ ವರ್ಷಗಳ ಅಧಿಕಾರವಧಿ 2012 ರಿಂದ ಆರಂಭವಾಯಿತು. 2018 ರ ಚುನಾವಣೆಯಲ್ಲೂ ಅದು ಮುಂದುವರಿಯಿತು. ಎರಡು ಬಾರಿಯೂ ವ್ಲಾಡಿಮಿರ್ ಪುಟಿನ್ ಅವರೇ ಅಧ್ಯಕ್ಷರಾಗಿದ್ದರು. ಈ ಮಧ್ಯೆ ೨೦೨೦ ರಲ್ಲಿ ಪುಟಿನ್ ಅವರು 2024 ರ ಚುನಾವಣೆಯಲ್ಲೂ ಸ್ಪರ್ಧೆಗೆ ಅವಕಾಶ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು.

ಮುಖ್ಯ ನ್ಯಾಯಮೂರ್ತಿ ವ್ಯಾಲೆರಿ ಜೋರ್ಕಿನ್ ಅವರು ಪುಟಿನ್ ಅವರಿಗೆ ರಷ್ಯಾದ ಅಧ್ಯಕ್ಷರಾಗಿ 6 ವರ್ಷಗಳ ಅವಧಿಗೆ ಅಧಿಕಾರ ಬೋಧನೆ ಮಾಡಿದರು. ಕ್ರೆಮ್ಲಿನ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ದಾಖಲೆಯ ಐದನೇ ಅವಧಿಗೆ ಪುಟಿನ್ ಪ್ರಮಾಣ ವಚನ ಸ್ವೀಕರಿಸಿದರು.

ಜನರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಪುಟಿನ್‌ಗೆ, ಜೋರ್ಕಿನ್ ಅವರು ಅಧ್ಯಕ್ಷೀಯ ಸಂಕೇತಗಳನ್ನು ನೀಡಿದರು. ಅಂದರೆ ಸೇಂಟ್ ಜಾರ್ಜ್ ಅವರ ಚಿನ್ನದ ಶಿಲುಬೆ, ರಷ್ಯಾದ ಕೋಟ್ ಆಫ್ ಆರ್ಮ್ಸ್ ಮತ್ತು ಸದ್ಗುಣ ಮತ್ತು ಪ್ರಾಮಾಣಿಕತೆಯ ಗುರುತಾದ ಚಿನ್ನದ ಸರಪಳಿಯನ್ನು ಪಡೆದರು.


Share It

You cannot copy content of this page