ಬಿ.ಎಸ್.ವೈ, ಮೋದಿ ಬಲದಲ್ಲಿ ಬೀಗುತ್ತಿರುವ ಬಿಜೆಪಿ
“ಬಂಗಾರ”ದ ನೆಲದಲ್ಲಿ ಕಾಂಗ್ರೆಸ್‌ಗೆ ಗೆಲುವಿನ ಗ್ಯಾರಂಟಿ
ಇಬ್ಬರಿಗೂ ನಷ್ಟ ತಂದೊಡ್ಡಲಿದೆ ಈಶ್ವರಪ್ಪ ಸ್ವಾಭಿಮಾನ
ವೈಟ್ ಪೇಪರ್ ವಿಶೇಷ
ಶಿವಮೊಗ್ಗ: ಮಲೆನಾಡ ಕೋಟೆ ಹೆಬ್ಬಾಗಿಲು, ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ರಾಷ್ಟಿçÃಯ ಪಕ್ಷಗಳು ತಮ್ಮ ಸೈದ್ಧಾಂತಿಕ ಸಂಘರ್ಷದ ತಿಕ್ಕಾಟಕ್ಕೆ ನಿಂತಿದ್ದರೆ, ಬಿಜೆಪಿ ಬಂಡಾಯದ ಮೂಲಕ ಸ್ವಾಭಿಮಾನ ಹರಡುತ್ತಿರುವ ಕೆ.ಎಸ್.ಈಶ್ವರಪ್ಪ, ಇಬ್ಬರಿಗೂ ತಲೆನೋವಾಗಿದ್ದಾರೆ.
ಬಿ.ಎಸ್.ವೈ, ಮೋದಿ ಬಲದಲ್ಲಿ ಬೀಗುತ್ತಿರುವ ಬಿಜೆಪಿ, “ಬಂಗಾರ”ದ ನೆಲದಲ್ಲಿ ಕಾಂಗ್ರೆಸ್‌ಗೆ ಗೆಲುವಿನ ಗ್ಯಾರಂಟಿ, ಇಬ್ಬರಿಗೂ ನಷ್ಟ ತಂದೊಡ್ಡಲಿದೆ ಈಶ್ವರಪ್ಪ ಸ್ವಾಭಿಮಾನ. ಇದಿಷ್ಟೇ ಶಿವಮೊಗ್ಗ ಜಿಲ್ಲೆಯ ಎಲೆಕ್ಷನ್ ಹೈಲೈಟ್ಸ್ ಎನ್ನಬಹುದು. ಜಿಲ್ಲೆಯಲ್ಲಿ ಹಿಂದೆ ನಡೆದ ಕೋಮುಭಾವನೆ ಕೆರಳಿಸುವ ಘಟನೆಗಳ ಮೇಲೆ ಹಿಂದು ಮತ ಕೇಳುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಕೂತಿಲ್ಲ. ಈಶ್ವರಪ್ಪಗೆ ಸ್ವಾಭಿಮಾನಷ್ಟೇ ಮುಖ್ಯ, ಅಪ್ಪ-ಮಕ್ಕಳ ಆರ್ಭಟಕ್ಕೆ ಕಡಿವಾಹ ಹಾಕಬೇಕೆಂಬುದೇ ಅಜೆಂಡಾ.
ಶಿವಮೊಗ್ಗ ಜಿಲ್ಲೆ ಸದಾ ಹೋರಾಟದ ಮೂಲಕ ರಾಜಕೀಯ ಅಸ್ತಿತ್ವ ಕಂಡುಕೊAಡ ಜಿಲ್ಲೆ. ಶಿವಮೊಗ್ಗ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ. ಇದೀಗ ಇಬ್ಬರು ಮುಖ್ಯಮಂತ್ರಿಗಳ ಮಕ್ಕಳು ಶಿವಮೊಗ್ಗ ಲೋಕಸಭೆಯ ಕಣದಲ್ಲಿದ್ದಾರೆ. ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಅವರಿಗೆ ತಂದೆ ಸಿಎಂ ಆಗಿದ್ದಾಗ ಮಾಡಿದ ಕೆಲಸಗಳು, ತಮ್ಮ ವಿಜಯೇಂದ್ರ ಅವರ ರಾಜಕೀಯ ತಂತ್ರಗಾರಿಕೆ ಬಲ ಎನ್ನಬಹುದು.
ಜಿಲ್ಲೆಯ ಮತ್ತೊಬ್ಬ ಮುಖ್ಯಮಂತ್ರಿ ಬಂಗಾರಪ್ಪ ಪುತ್ರಿ, ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ. ಇವರಿಗೆ ದೊಡ್ಮನೆ ಸೊಸೆಯೆಂಬ ಮತ್ತೊಂದು ಫ್ಲಸ್ ಪಾಯಿಂಟ್ ಇದೆ. ಜತೆಗೆ, ಜಿಲ್ಲೆಯಲ್ಲಿರುವ ಈಡಗ ಮತದಾರರನ್ನು ಸೇರಿದಂತೆ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ಬಂಗಾರದAತಹ ಅವಕಾಶವಿದೆ. ಅದೇನಾದರೂ ಸಾಧ್ಯವಾದರೆ, ಗೀತಾ ಗೆಲುವು ಗ್ಯಾರಂಟಿ.
ಈ ಇಬ್ಬರು ಮುಖ್ಯಮಂತ್ರಿಗಳ ಮಕ್ಕಳ ಕಾದಾಟದ ಜತೆಗೆ ಶಿವಮೊಗ್ಗ ಮತ್ತೊಬ್ಬ ಉಪಮುಖ್ಯಮಂತ್ರಿಯ ಸ್ವಾಭಿಮಾನ ಪರೀಕ್ಷೆಯನ್ನು ನಡೆಸಲಿದೆ. ಬಿಜೆಪಿಯಿಂದ ಟಿಕೆಟ್ ವಂಚಿತರಾದ ಈಶ್ವರಪ್ಪ, ಅಪ್ಪ-ಮಕ್ಕಳನ್ನು ಹಣಿಯಲು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್ ನೆರಳಿನಲ್ಲಿಯೇ ಆಟವಾಡುತ್ತಿರುವ ಅವರು, ಪಕ್ಷದೊಳಗಿನ ಬಿಎಸ್‌ವೈ ವಿರೋಧಿಗಳನ್ನೆಲ್ಲ ಒಟ್ಟುಗೂಡಿಸಿ, ಪಕ್ಷ ಹಾಳಾಗುವುದನ್ನು ತಡೆಯುತ್ತೇವೆ ಎಂದು ಟೊಂಕ ಕಟ್ಟಿದ್ದಾರೆ.
ಈಶ್ವರಪ್ಪ ಅವರ ಈ ಆಟಕ್ಕೇನಾದರೂ ಜಯ ಸಿಕ್ಕಿದ್ದಲ್ಲೇ ಆದರೆ, ಬಿಎಸ್‌ವೈಗೆ ತವರು ಜಿಲ್ಲೆ ಶಿವಮೊಗ್ಗದಲ್ಲಿಯೇ ಹಿನ್ನಡೆಯಾಗುವ ಸಾಧ್ಯತೆಯಿದೆ. ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಈಶ್ವರಪ್ಪ ಸೆಳೆದುಕೊಂಡರೆ, ಗೀತಾ ಶಿವರಾಜ್ ಕುಮಾರ್, ಬಂಡಾರಪ್ಪ ಬೆಂಬಲ, ಅಹಿಂದ ಮತಗಳ ಸೆಳೆತ, ಗ್ಯಾರಂಟಿಗಾಗಿ ಕಾಂಗ್ರೆಸ್ ಕಡೆಗೆ ಬಂದಿರುವ ಒಂದಷ್ಟು ಮತಗಳು ಸೇರಿ ಗೆಲುವಿನ ದಡ ಸೇರುವ ಎಲ್ಲ ಸಾಧ್ಯತೆಗಳಿವೆ.
ಆದರೆ, ಮೋದಿ ಅಲೆಯಲ್ಲಿ ತೇಲುವ ಮಲೆನಾಡ ಮಂದಿ, ಬಿಜೆಪಿ ಬಿಟ್ಟು ಬೇರೆ ಕಡೆಗೆ ವೋಟ್ ಮಾಡ್ತಾರಾ ಎಂಬುದನ್ನು ಕಾದುನೋಡಬೇಕು. ಜತೆಗೆ, ಇಡೀ ರಾಜ್ಯದಲ್ಲಿಯೇ ಕಮಲ ಅರಳಿಸಲು ಪಣ ತೊಟ್ಟಿರುವ ವಿಜಯೇಂದ್ರ, ಬಿಎಸ್‌ವೈ, ತಮ್ಮ ಕುಟುಂಬದ ಸೋಲನ್ನು ಸುಲಭದಲ್ಲಿ ಒಪ್ಪಿಕೊಳ್ತಾರಾ? ಎಂಬುದೀಗ ಕುತೂಹಲದ ಪ್ರಶ್ನೆ. ಹಿಂದುತ್ವದ ಮತಗಳು ಚದುರದಂತೆ ತಡೆಯುವುದು, ಅಹಿಂದ ಮತಗಳಿಗೆ ಎಲ್ಲೂ ಆಘಾತವಾಗದಂತೆ ನೋಡಿಕೊಳ್ಳುವುದು ಬಿಎಸ್‌ವೈ ಕುಟುಂಬದ ಸವಾಲಾಗಿದ್ದು, ಅದನ್ನು ಸರಾಗವಾಗಿ ಈವರೆಗೆ ಮಾಡಿಕೊಂಡು ಬಂದಿದ್ದಾರೆ.
ಕೋಮುಸAಘರ್ಷಕ್ಕಿಲ್ಲ ಅವಕಾಶ: ಸಾಮಾನ್ಯವಾಗಿ ಅನೇಕ ಕ್ಷೇತ್ರಗಳಲ್ಲಿ ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ನಾಯಕರು ಮತ ಕೇಳುತ್ತಿದ್ದಾರೆ. ಆದರೆ, ಬಿಎಸ್‌ವೈ ತವರು ಜಿಲ್ಲೆ ಹಿಂದುತ್ವದ ಕೆಂಡದುAಡೆಯಾಗಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಅಪ್ಪಿತಲ್ಲಿಯೂ ಅಂತಹ ಸಾಹಸಕ್ಕೆ ಬಿಎಸ್‌ವೈ ಕುಟುಂಬ ಕೈಹಾಕಿಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಆಲೋಚನೆಯಲ್ಲೇ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ, ಬ್ರಾಹ್ಮಣ ಸಮುದಾಯದ ಮತಗಳು ಬಿಜೆಪಿ ಪಾಲಾದರೆ, ಅಹಿಂದ ಮತಗಳು ಕಾಂಗ್ರೆಸ್ ಕಡೆಗೆ ಹೋಗದಂತೆ ತಡೆಯಬೇಕಿದೆ. ಇನ್ನು ಹಿಂದುಳಿದ ವರ್ಗದ ನಾಯಕ ಎನ್ನುವ ಈಶ್ವರಪ್ಪ ಬಗ್ಗೆಯೂ ಬಿಎಸ್‌ವೈ ಕುಟುಂಬ ಕಣ್ಣಿಟ್ಟಿದೆ.
ಬಿಗ್ ಫೈಟ್: ಇಬ್ಬರು ಮಾಜಿ ಸಿಎಂ ಕುಟುಂಬದ ನಡುವೆ ನಡೆಯುತ್ತಿರುವ ಹಣಾಹಣಿ ಎಂದೇ ಶಿವಮೊಗ್ಗ ಚುನಾವಣೆಯನ್ನು ಬಿಂಬಿಸಲಾಗುತ್ತಿದೆ. ಮಧುಬಂಗಾರಪ್ಪ ಸಚಿವರಾಗಿದ್ದುಕೊಂಡು ತಮ್ಮ ಅಕ್ಕನಿಗೆ ಗೆಲುವು ತರಬೇಕಾದ ಅನಿವಾರ್ಯತೆಯಿದೆ. ಗ್ಯಾರಂಟಿ, ತಂದೆಯ ಕಾರ್ಯಗಳು, ಕಾಂಗ್ರೆಸ್ ನಾಯಕರ ಮುಂದಾಲೋಚನೆಗಳನ್ನೇ ಗೆಲುವಿಗೆ ಫ್ಲಸ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಿಎಸ್‌ವೈ ಕುಟುಂಬ ಮೋದಿ ಅಲೆ, ಅಭಿವೃದ್ಧಿ ಕಾರ್ಯ, ಲಿಂಗಾಯತ ಅಸ್ಮಿತೆಯ ಮೂಲಕ ಗೆಲ್ಲುವ ತವಕದಲ್ಲಿದೆ. ಹೀಗಾಗಿ, ಕ್ಷೇತ್ರದಲ್ಲಿ ಬಿಗ್ ಫೈಟ್ ಏರ್ಪಟ್ಟಿದ್ದು, ಕೂತೂಹಲ ಗರಿಗೆದರಿದೆ.