ಅಪರಾಧ ಸುದ್ದಿ

ನಿರ್ಮಲಾ ಸೀತಾರಾಮನ್ ಫೇಕ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿ 22 ಲಕ್ಷ ರು ಕಳೆದುಕೊಂಡ ಮಹಿಳೆ

Share It

ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ಹೂಡಿಕೆ ಸಂಬಂಧ ನಿರ್ಮಲಾ ಸೀತಾರಾಮನ್ ಅವರದ್ದೇ ರೀತಿಯಲ್ಲಿ ಹರಿದಾಡುವ ಫೇಕ್ ವಿಡಿಯೋ ಲಿಂಕ್ ಕ್ಲಿಕ್ ಮಾಡಿ, ಮಹಿಳೆಯೊಬ್ಬರು 22 ಲಕ್ಷ ರು. ಕಳೆದುಕೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಎಐ ಬಳಸಿ ವಿಡಿಯೋ ಮಾಡಿ, ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಹರಿಬಿಡಲಾಗಿದೆ. ಇಲ್ಲಿ ಹಣ ಹೂಡಿಕೆ ಸಂಬಂಧ ಕೆಲವು ಸೂಚನೆಗಳನ್ನು ನೀಡಲಾಗುತ್ತದೆ. ಅದನ್ನು ನಂಬಿ, ಆ ವಿಡಿಯೋದ ಲಿಂಗ್ ಕ್ಲಿಕ್ ಮಾಡುತ್ತಿದ್ದಂತೆ ಆಕೆಯ ಅಕೌಂಟ್‌ನಲ್ಲಿದ್ದ 22 ಲಕ್ಷ ರು. ಹಣವನ್ನು ಖದೀಮರು ದೋಚಿದ್ದಾರೆ.

ಈ ಸಂಬಂಧ ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂತಹ ಫೇಕ್ ವಿಡಿಯೋ ಮೂಲಕ ವಂಚನೆ ಮಾಡುವ ಜಾಲ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page