ರಾಜಕೀಯ ಸುದ್ದಿ

ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ಸಚಿವ ರಾಮಲಿಂಗಾ ರೆಡ್ಡಿ ಮನವಿ 

Share It

ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ಸಚಿವ ರಾಮಲಿಂಗಾ ರೆಡ್ಡಿ ಮನವಿ 

ಬೆಂಗಳೂರು: ತಮ್ಮ ಕ್ಷೇತ್ರ ವ್ಯಾಪ್ತಿಯ ಮೆಟ್ರೋ ನಿಲ್ದಾಣಗಳಿಗೆ ಹೆಸರು ಬದಲಾಯಿಸಿ, ಸ್ಥಳೀಯ ಹೆಸರಿಗಳನ್ನಿಡಲು ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ರಾಮಲಿಂಗ ರೆಡ್ಡಿ ಪತ್ರ ಬರೆದು ಒತ್ತಾಯಿಸಿದ್ದಾರೆ. 

ಮೆಟ್ರೋ ನೋಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಸಚಿವರು ತಮ್ಮ ಕ್ಷೇತ್ರ ವ್ಯಾಪ್ತಿಯ ಮೂರು ನಿಲ್ದಾಣಗಳಿಗೆ ಈಗಾಗಲೇ ಅಂತಿಮವಾಗಿರುವ ಹೆಸರುಗಳು ಅಷ್ಟೊಂದು ಸಮಂಜಸವಾಗಿಲ್ಲ. ಈ ಕಾರಣದಿಂದ ಆವಿಗಳಿಗೆ ಸ್ಥಳೀಯ ಐತಿಹಾಸಿಕ ಹಾಗೂ ಬೌಗೋಳಿಕವಾಗಿ ಹೊಂದಿಕೊಳ್ಳುವ ಹೆಸರಿಡಬೇಕು ಎಂದು ತಿಳಿಸಿದ್ದಾರೆ. 

ಜೆ ಪಿ ನಗರ ನಾಲಕ್ನೇ ಹಂತ ಮೆಟ್ರೋ ನಿಲ್ದಾಣ ಎಂಬ ಹೆಸರಿನ ಬದಲಿಗೆ ಎನ್ ಎಸ್ ಪಾಳ್ಯ ಮೆಟ್ರೋ ನಿಲ್ದಾಣ ಎಂದು, ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಎಸ್ ಜಿ ಪಾಳ್ಯ ಮೆಟ್ರೋ ನಿಲ್ದಾಣ ಎಂದು ಮತ್ತು ಡೈರಿ ಸರ್ಕಲ್ ಮೆಟ್ರೋ ನಿಲ್ದಾಣಕ್ಕೆ ಲಕ್ಕಸಂದ್ರ ಮೆಟ್ರೋ ನಿಲ್ದಾಣ ಎಂದು ಹೆಸರು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಜಯದೇವ ಸರ್ಕಲ್ ನಿಂದ ಮಹಾತ್ಮ ಗಾಂಧಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ಸಾರ್ವಜನಿಕ ಅಭಿಪ್ರಾಯದ ಆಧಾರದಲ್ಲಿ ಕೆಲವು ಹೆಸರು ಬದಲಾಯಿಸಬೇಕು ಎಂದು ರಾಮಲಿಂಗ ರೆಡ್ಡಿ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. 


Share It

You cannot copy content of this page