ಬೆಂಗಳೂರು: ಬಹುತೇಕ ಸಂಜೆ ವೇಳೆಗೆ ಎಲ್ಲಾ ಸಚಿವರಿಗೂ ಖಾತೆ ಹಂಚಿಕೆಯಾಗಲಿದ್ದು, ಮೂವರು ಹಿರಿಯ ಸಚಿವರ ಖಾತೆಗಳಲ್ಲಿ ಬದಲಾವಣೆ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
ಪ್ರಮುಖವಾಗಿ ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ನೀಡಲು ತೀರ್ಮಾನಿಸಲಾಗಿದೆ. ಉಳಿದಂತೆ ಡಿಸಿಎಂ ಡಾ. ಜಿ ಪರಮೇಶ್ವರ್, ರಾಮಲಿಂಗಾ ರೆಡ್ಡಿ ಅವರ ಖಾತೆಗಳು ಬದಲಾಗುತ್ತವೆ ಎಮಂದು ಹೇಳಗಾಗಿದ್ದು, ಸಂಜೆ ವೇಳೆಗೆ ಲೋಕಭವನಕ್ಕೆ ರವಾನೆಯಾಗುವ ಸಾಧ್ಯತೆಯಿದೆ.
ರಾಮಲಿಂಗಾ ರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಸಾಧ್ಯತೆಯಿದ್ದು, ಜಲಸಂಪನ್ಮೂಲ ಇಲಾಖೆಯನ್ನು ಮರಳಿ ಎಂ ಬಿ ಪಾಟೀಲ್ ಅವರಿಗೆ ನೀಡಲಾಗಿದೆ ಎನ್ನಲಾಗುತ್ತಿದೆ. ಭಾರೀ ಕೈಗಾರಿಕಾ ಇಲಾಖೆಯನ್ನು ಡಿಸಿಎಂ ಡಾ ಪರಮೇಶ್ವರಗೆ ನೀಡಲಿದ್ದು, ಪರಮೇಶ್ವರ ಬಳಿಯಿರುವ ಕಂದಾಯ ಇಲಾಖೆ ಮರಳಿ ಕೃಷ್ಣ ಬೈರೇಗೌಡ ಅವರಿಗೆ ವರ್ಗಾವಣೆಯಾಗಲಿದೆ.
ಉಳಿದಂತೆ ಇನ್ನಿತರರ ಖಾತೆಗಳು ಯಥಾಸ್ಥಿತಿ ಮುಂದುವರಿಯಲಿದ್ದು, ಸಂತೋಷ್ ಲಾಡ್ ಕಾರ್ಮಿಕ ಇಲಾಖೆಯಲ್ಲಿ, ಜಮೀರ್ ಅಹಮದ್ ವಸತಿ ಇಲಾಖೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

