ಬೆಂಗಳೂರು: ಮುಂದಿನ ಮೂರು ವರ್ಷದ ಅವಧಿಯಲ್ಲಿ ಮೂರು ಸಾವಿರ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಸರಕಾರ ತೀರ್ಮಾನಿಸಿದೆ.
ಈ ಕುರಿತು ಉಡುಪಿಯಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಮ್ಮ ಸರಕಾರ ಸರಕಾರಿ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಬದ್ಧತೆಯನ್ನು ಹೊಂದಿದೆ. ಇದರ ಭಾಗವಾಗಿ ಈ ವರ್ಷವೇ 100 ಪಬ್ಲಿಕ್ ಶಾಲೆಗಳನ್ನು ತೆರೆಯುತ್ತೇವೆ. ಮುಂದಿನ ಮೂರು ವರ್ಷಗಳಲ್ಲಿ ಮೂರು ಸಾವಿರ ಶಾಲೆಗಳನ್ನು ತೆರೆಯುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಗ್ರೇಸ್ ಮಾರ್ಕ್ ಎರಡನೇ ಮತ್ತು ಮೂರನೇ ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ. ೨೦ ಗ್ರೇಸ್ ಮಾರ್ಕ್ ಯಾವತ್ತೂ ಇರುತ್ತಾ ಎಂಬುದು ಕೆಲವರಿಗೆ ಸಂಶಯ ಇದೆ. ಆದರೆ, ಮುಂದಿನ ಪರೀಕ್ಷೆಗಳಲ್ಲಿ ಈ ಗ್ರೇಸ್ ಮಾರ್ಕ್ ಪಡೆಯಲು ಅವಕಾಶವಿರುವುದಿಲ್ಲ ಎಂದರು.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಫಲಿತಾಂಶದಲ್ಲಿ ಯಾವಾಗಲೂ ಟಾಪರ್ ಆಗಿರುತ್ತಿದ್ದವು. ಆದರೆ, ಕೆಲವು ವರ್ಷಗಳಿಂದ ಫಲಿತಾಂಶ ಇಳಿಮುಖವಾಗಿದ್ದು, ಕೆಳಗಿನ ಸ್ಥಾನಕೆಕ ಹೋಗಿದ್ದವು. ಆದರೆ, ಈಗ ಮತ್ತೇ ಸುಧಾರಣೆ ಕಂಡಿದ್ದು, ಮತ್ತೇ ಟಾಪ್ ಸ್ಥಾನಗಳನ್ನು ಅಲಂಕರಿಸಿವೆ. ಹೀಗಾಗಿ, ಈ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದರು.
ಪರೀಕ್ಷೆಯ ಪಾವಿತ್ರö್ಯತೆಯನ್ನು ನಾವು ಉಳಿಸಿದ್ದೇವೆ. ಇದಕ್ಕಾಗಿಯೇ 20 ಗ್ರೇಸ್ ಮಾರ್ಕ್ ನೀಡುತ್ತಿದ್ದೆವು. ಆದರೆ, ಪೂರ ಪರೀಕ್ಷೆ ತೆಗೆದುಕೊಳ್ಳುವವರಿಗೂ ಇದೇ ರೀತಿ ಗ್ರೇಸ್ ಮಾರ್ಕ್ ನೀಡಿದರೆ, ಅದು ಅಷ್ಟೊಂದು ಒಳಿತಲ್ಲ ಎಂದು ತೀರ್ಮಾನಿಸಿ, ಗ್ರೇಸ್ ಮಾರ್ಕ್ ಕೊಡುವುದನ್ನು ನಿಲ್ಲಿಸಿದ್ದೇವೆ ಎಂದರು.