ಅಪರಾಧ ಉಪಯುಕ್ತ ಸುದ್ದಿ

ಅಪಘಾತಕ್ಕೆ ಎರಡು ಪುಟದ ಪ್ರಬಂಧ ಬರೆಯುವ ಶಿಕ್ಷೆ! ಇಬ್ಬರ ಸಾವಿಗೆ ಕಾರಣವಾದ ಅಪ್ರಾಪ್ತ ಚಾಲಕ

Share It

ಪುಣೆ: ಅಪಘಾತವೆಸಗಿ ಇಬ್ಬರ ಸಾವಿಗೆ ಕಾರಣವಾಗಿದ್ದ ಅಪ್ರಾಪ್ತ ಚಾಲಕನಿಗೆ ನ್ಯಾಯಾಲಯ, ಪ್ರಬಂಧ ಬರೆಯುವ ಶಿಕ್ಷೆ ನೀಡುವ ಮೂಲಕ ವಿಭಿನ್ನ ಹೆಜ್ಜೆಯನ್ನಿಟ್ಟು ಆತನಿಗೆ ಜಾಮೀನು ನೀಡಿದೆ.

ಭಾನುವಾರ ಪುಣೆಯ ಕಲ್ಯಾಣಿ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ೧೭ ವರ್ಷದ ಅಪ್ರಾಪ್ತ ಪುತ್ರನೊಬ್ಬ ದುಬಾರಿ ಪೋಶೆ ಕಾರು ಚಲಾಯಿಸಿ, ನಿಯಂತ್ರಣ ತಪ್ಪಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾಗಿದ್ದ. ಆತನ ತಂದೆಯನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸಿರುವ ಪೊಲೀಸರು, ೧೭ ವರ್ಷದ ಬಾಲಕನನ್ನು ವಯಸ್ಕನಾಗಿಯೇ ಪರಿಗಣಿಸಿ ಪ್ರಕರಣ ದಾಖಲಿಸಿದ್ದರು.

ಬಾಲಕ ಅಪಘಾತ ಮಾಡುವ ಮೊದಲೇ ಆತನನ್ನು ಬಂಧನ ಮಾಡಿದ್ದ ಪೊಲೀಸರು, ಆತ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಎಂಬ ಆರೋಪದಡಿ, ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಮಾಡಿದ್ದರು. ಆಗ ನ್ಯಾಯಮಂಡಳಿ ಆತನನ್ನು ಮದ್ಯವ್ಯಸನ ನಿರ್ಮೂಲನಾ ಕೇಂದ್ರಕ್ಕೆ ದಆಖಲು ಮಾಡುವಂತೆ ಸೂಚನೆ ನೀಡಿತ್ತು. ಜತೆಗೆ, ಕೇವಲ ಒಂದು ಗಂಟೆಯ ಅವಧಿಯಲ್ಲಿ ಜಾಮೀನು ನೀಡಿತ್ತು ಎನ್ನಲಾಗಿದೆ.

ಕಾನೂನು ಸಂಘರ್ಷ ಎದುರಿಸುತ್ತಿರುವ ಬಾಲಕನು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ರಸ್ತೆ ಸಂಚಾರಿ ನಿಯಮಗಳನ್ನು ಅರಿಯಬೇಕು ಮತ್ತು ರಸ್ತೆ ಸುರಕ್ಷತೆ ಮತ್ತು ಅದರ ಪರಿಹಾರೋಪಯಾಗಳ ಬಗ್ಗೆ ೧೫ ದಿನಗಳಲ್ಲಿ ೩೦೦ ಪದಗಳ ಪ್ರಬಂಧ ಬರೆದು ಸಲ್ಲಿಕೆ ಮಾಡಬೇಕು ಎಂದು ಆದೇಶ ಮಾಡಿತ್ತು.

ಅಲ್ಲಿ ಜಾಮೀನು ಪಡೆದು ಬಂದ ನಂತರ ಅಪಘಾತ ನಡೆಸಿರುವ ಬಾಲಕ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾಗಿದ್ದಾನೆ. ಹೀಗಾಗಿ, ಆತನನ್ನು ವಯಸ್ಕನೆಂದೇ ಪರಿಗಣಿಸಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಜತೆಗೆ, ಆತನ ತಂದೆಯನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದ್ದಾರೆ.

ಈ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದ್ದು, ನ್ಯಾಯಾಲಯ ಆತನ ಅಪರಾಧವನ್ನು ಲಘುವಾಗಿ ಪರಿಗಣಿಸಿದ್ದರ ಪರಿಣಾಮ ಇಬ್ಬರು ಅಮಾಯಕರು ಸಾವಿಗೀಡಾಗಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಜತೆಗೆ ನ್ಯಾಯಾಲಯಗಳ ಅಸೂಕ್ಷö್ಮತೆಯನ್ನು ಪ್ರಶ್ನೆ ಮಾಡಿದ್ದಾರೆ.


Share It

You cannot copy content of this page