ಬೆಂಗಳೂರು: ರಾಮಲಿಂಗ ರೆಡ್ಡಿ ಅವರ ರಾಜೀನಾಮೆ ವದಂತಿಯ ಬೆನ್ನಲ್ಲೇ ಅವರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಸಿಎಂ ಡಿಕೆ ಶಿವಕುಮಾರ್ ನಡೆಸುತ್ತಿದ್ದಾರೆ.
ರಾಮಲಿಂಗ ರೆಡ್ಡಿ ರಾಜೀನಾಮೆ ವದಂತಿ ಹಿನ್ನಲೆಯಲ್ಲಿ ಮಾತುಕತೆಗೆ ಮುಂದಾದ ಸಿಎಂ: ತಮ್ಮ ಕಚೇರಿಗೆ ಕರೆಸಿಕೊಂಡ ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು. ಅಧಿಕಾರಿಗಳ ಸಭೆ ಮುಗಿಯುತ್ತಿದ್ದಂತೆ ತಮ್ಮ ಕಚೇರಿಗೆ ಕರೆಸಿಕೊಂಡ ಸಿಎಂ, ರಾಮಲಿಂಗಾ ರೆಡ್ಡಿ ಅವರ ಜತೆಗೆ ಮಾತುಕತೆ ನಡೆಸಿದರು.
ಇದಕ್ಕೂ ಮೊದಲು ಕೃಷ್ಣ ಬೈರೇಗೌಡ ಅವರನ್ನು ಕರೆಸಿ ಸಿಎಂ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಬೆಂಗಳೂರು ಉಸ್ತುವಾರಿ ಖಾತೆ ಹಂಚಿಕೆಯ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿ ಮುನಿಸಿಕೊಂಡಿದ್ದರು. ಆ ಖಾತೆಯನ್ನು ಕೃಷ್ಣ ಬೈರೇಗೌಡ ಅವರಿಗೆ ನೀಡಲು ಹೈಕಮಾಂಡ್ ತೀರ್ಮಾನಿಸಿತ್ತು ಎನ್ನಲಾಗಿದೆ.
ಇದೀಗ ಕೃಷ್ಣ ಬೈರೇಗೌಡ ಅವರನ್ನು ಕಂದಾಯ ಇಲಾಖೆಯಲ್ಲಿಯೇ ಮುಂದುವರಿಯುವಂತೆ ಹಾಗೂ ರಾಮಲಿಂಗ ರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೊಡುವಂತೆ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ತಮ್ಮ ನಿರ್ಧಾರ ವಾಪಸ್ ಪಡೆಯಬಹುದು ಎನ್ನಲಾಗಿದ್ದು, ಸಮಸ್ಯೆ ಸರಳವಾಗಿ ಮುಗಿದಂತಾಗಿದೆ.

