ಸುದ್ದಿ

ವೆನೆಜುವೆಲಾದಲ್ಲಿ ಭಾರಿ ಭೂಕಂಪ, 32 ಸಾವು, ಸಾವಿರಾರು ಮಂದಿ ಸಾವಿನ ಶಂಕೆ!

Share It

ಕಾರಕಾಸ್ : ವೆನೆಜುವೆಲಾದಲ್ಲಿ ಭಯಾನಕವಾದ ಭೂಕಂಪ ಸಂಭವಿಸಿದೆ. ಕಟ್ಟಡಗಳು ಧರೆಗುರುಳಿವೆ. ಅಲ್ಲಿಂದ ಆರ್ತನಾದಗಳು ಕೇಳಿ ಬರುತ್ತಿವೆ. ಪ್ರಸ್ತುತ 32 ಜನರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಸಾವಿರಾರು ಜನರು ಮೃತಪಟ್ಟಿರುವ ವರದಿಗಳಿವೆ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುವ ಸಾಧ್ಯತೆಗಳಿವೆ. ನೂರಾರು ಜನರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಮತ್ತೊಂದು ಕಡೆ ಜನರು ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂತೋನಿಯೋ ನಾನು ನಿನ್ನ ಅಮ್ಮ, ಇಲ್ಲಿ ಇದ್ದೇನೆ ಎಂಬ ತಾಯಿಯ ಕೂಗು ಕಾರಕಾಸ್‌ನ 22ನೇ ಅಂತಸ್ತಿನ ಕಟ್ಟಡದ ಧರಾಶಾಹಿಯಾದ ಮಣ್ಣಿನ ರಾಶಿಯಲ್ಲಿ ಪ್ರತಿಧ್ವನಿಸಿದೆ. ಬುಧವಾರ ವೆನೆಜುವೆಲಾದಲ್ಲಿ ಸಂಭವಿಸಿದ ಎರಡು ಶಕ್ತಿಶಾಲಿ ಭೂಕಂಪಗಳಿಂದ ಈ ಕಟ್ಟಡ ಕುಸಿದು ಬಿದ್ದಿತ್ತು.

ಆಸುಪಾಸಿನವರು ನಿರಾಶೆಯಿಂದ ನೋಡುತ್ತಿದ್ದರು. ಅವರಲ್ಲಿ ಒಬ್ಬರು ಅವಶೇಷಗಳ ಮೇಲೆ ಹತ್ತಿ ಯಾರಾದರೂ ಉತ್ತರಿಸುತ್ತಾರೆಯೇ ಎಂದು ಕಿವಿ ಅಗಲಿಸಿ ಕೇಳುತ್ತಿದ್ದರು. ಆದರೆ, ಸುತ್ತ ಮುತ್ತ ಮೌನವೇ ಆವರಿಸಿತ್ತು. ಟಾರ್ಚ್‌ಲೈಟ್‌ಗಳು ಬೇಕು ಎಂದು ಸ್ವಯಂಸೇವಕರಲ್ಲಿ ಒಬ್ಬರು ಹೇಳಿದರು. ಒಬ್ಬ ಪೊಲೀಸ್ ಅಧಿಕಾರಿ ಮಾತ್ರ ಅವರ ಜೊತೆಗಿದ್ದರು. ರಕ್ಷಣಾ ತಂಡ ಬರುವುದನ್ನು ಅವರು ಕಾಯುತ್ತಿದ್ದರು.


Share It

You cannot copy content of this page