- ಪಾದಚಾರಿ ಮಾರ್ಗ ಕನಿಷ್ಟ 3 ಮೀ. ಎಂಡ್ ಟು ಎಂಡ್ ನಿರ್ಮಾಣ ಮಾಡಬೇಕು. ಸ್ಲಿಪ್ ರಸ್ತೆಗಳಲ್ಲಿ 1.8 ಮೀ. ವರೆಗೆ ಮಾಡಬಹುದು
- ರಸ್ತೆ ಬದಿ ಸಂಪೂರ್ಣ ಒತ್ತುವರಿಗಳನ್ನು ತೆರವುಗೊಳಿಸಬೇಕು
- ಖಾಸಗಿಯವರು ಟ್ರಾನ್ಸ್ ಫಾರ್ಮರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಇಟ್ಟಿದ್ದಾರೆ, ಗುರುತಿಸಿ ತೆರವುಗೊಳಿಸಿ
- ಸರ್ವೀಸ್ ರಸ್ತೆಗಳಲ್ಲಿ ಬಫರ್ ಜಾಗ ಸಿಗುವ ಕಡೆ, ಟ್ಯಾಕ್ಸಿ/ಬಸ್ ಡ್ರಾಪ್ – ಪಿಕ್ ಅಪ್ ನಿರ್ಮಾಣ ಮಾಡಿ, ಅದಕ್ಕೆ ಕಲರ್ ಕೋಡಿಂಗ್ ಮಾಡಿ
- ಮುಖ್ಯ ರಸ್ತೆಯಲ್ಲಿ ಬಸ್ ಬೇ ನಿರ್ಮಾಣ
- ವೈಟ್ ಟಾಪಿಂಗ್ ಅಕ್ಟೋಬರ್ ನಲ್ಲಿ ಪ್ರಾರಂಭಿಸಿ ಜನವರಿಯೊಳಗಾಗಿ ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ಸಂಸ್ಥೆಗಳಿಗೆ ಶೇ. 50 ರಷ್ಟು Work from Home ಮಾಡಿಸಿ, ಕೆಲಸ ಪ್ರಾರಂಭಿಸಿ. ಅವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ.
- ಇಂಟರ್ ನಲ್ ರೋಡ್ಸ್ ಗಳನ್ನು ಬಳಸಿಕೊಳ್ಳಿ, ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
- ORRCA & Police ಜೊತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳೋಣ.
- ಎಲ್ಲಾ ಪ್ರಕ್ರಿಯೆಗಳನ್ನು ಕೂಡಲೆ ಅಂತಿಮಗೊಳಿಸಲು ಅಧಿಕಾರಿಗಳಿಗೆ ಸೂಚನೆ.
ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ ಅತೀಕ್, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ನಿತೀಶ್, ಡಿಸಿಪಿ ಶಾಹಿಲ್ ಬಾಗ್ಲಾ, ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಪ್ರಹ್ಲಾದ್, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

