ಬೆಂಗಳೂರು: ಖಾತೆ ಹಂಚಿಕೆಯಾಗಿ ಎಲ್ಲ ಸರಿ ಹೋಯಿತು ಎಂದ್ರು ಕೂಡ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಇದರ ಭಾಗವಾಗಿ ಸಚಿವ ಜಮೀರ್ ಅಹಮದ್ ತಮಗೆ ಜಿಲ್ಲಾ ಉಸ್ತುವಾರಿ ಹೊಬೆಗಾರಿಕೆ ಬೇಡ ಎಂದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಖಾತೆ ಹಂಚಿಕೆಯಲ್ಲಿ ಜಮೀರ್ ಅಹಮದ್ ಅವರಿಗೆ ವಸತಿ ಇಲಾಖೆಯನ್ನು ನೀಡಲಾಗಿದೆ. ಹಿಂದೆ ಅವರ ಬಳಿಯಿದ್ದ ಅಲ್ಪ ಸಂಖ್ಯಾತರ ಇಲಾಖೆಯನ್ನು ಹೆಚ್ಚುವರಿಯಾಗಿ ಯು ಟಿ ಖಾದರ್ ಅವರಿಗೆ ನೀಡಲಾಗಿದೆ. ಇದು ಜಮೀರ್ ಅವರಿಗೆ ಸಹಜವಾಗಿಯೇ ಬೇಸರ ತರಿಸಿದೆ. ಇದೆ ಕಾರಣಕ್ಕೆ ಅವರು ತಮ್ಮ ಖಾತೆಯ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಆಗಸ್ಟ್ 15 ರಂದು ಧ್ವಜಾರೋಹಣ ನೆರವೇರಿಸಲು ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನು ಜಮೀರ್ ಅವರಿಗೆ ನೀಡಲಾಗಿದೆ. ಆದರೆ, ತಾನು ಕೆಲಸದ ಒತ್ತಡದ ಕಾರಣಕ್ಕೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಕೂಡ ಜಮೀರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದು ಇದೀಗ ಮತ್ತೊಂದು ಸುತ್ತಿನ ಅಸಮಾಧಾನ ಸ್ಪೋಟಕ್ಕೆ ಕಾರಣವಾಗಲಿದೆ.
ಬಿಬಿಎಂಪಿ ಚುನಾವಣೆ ಸೇರಿ ಅನೇಕ ಚುನಾವಣೆಗಳು ಮುಂದೆ ಇದ್ದು, ಈ ಕಾರಣದಿಂದ ಜಿಲ್ಲಾ ಉಸ್ತುವಾರಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಿರುವ ಜಮೀರ್, ದ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾದ್ಯವಿಲ್ಲ, ಇದಕ್ಕೆ ವಿನಾಯಿತಿ ನೀಡಿ ಎಂದು ಮನವಿ ಮನವಿ ಮಾಡಿಕೊಂಡಿದ್ದಾರೆ.
ಜಮೀರ್ ನಡೆ ಈಗಾಗಲೇ, ಸಚಿವ ಸ್ಥಾನ ವಂಚಿತರಾಗಿ ಅಸಮಾಧಾನಗೊಂಡಿರುವ ಕೇಳ್ವು ನಾಯಕರಿಗೆ ಹೊಸದೊಂದು ದಾರಿ ಮಾಡಿಕೊಟ್ಟಿದೆ. ಇದನ್ನೇ ನೆಪವಾಗಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಸಮಾಧಾನ ಸ್ಫೋಟದ ಸಾಧ್ಯತೆಯಿದೆ. ಇನ್ನು ಕೆಲವು ಶಾಸಕರು ರಾಜೀನಾಮೆಯ ಬೆದರಿಕೆ ಹಾಕಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

