ಚಿತ್ರದುರ್ಗ: ಮಠಕ್ಕೆ ಬಂದಿದ್ದ ಮಹಿಳೆಯ ಜತೆಗೆ ಅನುಚಿತವಾಗಿ ವರ್ತನೆ ಮಾಡಿದ ಆರೋಪದಲ್ಲಿ ಸ್ವಾಮೀಜಿಯೊಬ್ಬರಿಗೆ ಮಹಿಳೆಯ ಸಂಬಂಧಿಕರು ಥಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಳಿ ನಡೆದಿದೆ.
ಬಳ್ಳಾರಿ ಮೂಲದ ಮಹಿಳೆಯರೊಬ್ಬರನ್ನು ವಾಮಾಚಾರ, ಪೂಜೆಯ ನೆಪವೊಡ್ಡಿ ಕರೆಸಿಕೊಂಡು ಆಕೆಯ ಜತೆಗೆ ಅನುಚಿತ ವರ್ತನೆ ಆರಂಭಿಸಿದ್ದಾನೆ. ಇದು ಗೊತ್ತಾಗುತ್ತಿದ್ದಂತೆ ಆಕೆಯ ಸಂಭಾಧಿಕರು ಸ್ವಾಮೀಜಿಯನ್ನು ಮನಬಂದಂತೆ ಥಳಿಸಿದ್ದಾರೆ.
ಘಟನೆಯ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

