ಸುದ್ದಿ

ಇಸ್ರೇಲ್ ವಿಮಾನ ಸ್ಪೋಟಕ್ಕೆ ಸಂಚು: ಭಾರತೀಯ ಮೂಲದ ಪೈಲಟ್ ಸಾಹಸದಿಂದ ನೂರಾರು ಜನ ಪಾರು ! 

Share It

ದುಬೈ: ದುಬೈನಿಂದ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌‌ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದಲ್ಲಿ (FZ1073) ಸಹ-ಪೈಲಟ್ ನಡೆಸಿದ ಭೀಕರ ವಿಧ್ವಂಸಕ ಕೃತ್ಯ ಹಾಗೂ ಹತ್ಯೆಯತ್ನವನ್ನು ಭಾರತೀಯ ಮೂಲದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ತಮ್ಮ ಪ್ರಾಣದ ಹಂಗು ತೊರೆದು ವಿಫಲಗೊಳಿಸಿದ್ದಾರೆ. ಜೀವನ್ಮರಣ ಹೋರಾಟದ ನಡುವೆಯೂ ಅದಮ್ಯ ಧೈರ್ಯ ತೋರಿದ ಕ್ಯಾಪ್ಟನ್, ವಿಮಾನದಲ್ಲಿದ್ದ 180ಕ್ಕೂ ಹೆಚ್ಚು ಪ್ರಯಾಣಿಕರನ್ನು ಪವಾಡಸದೃಶವಾಗಿ ರಕ್ಷಿಸಿದ್ದಾರೆ.

​ನಡು ಆಕಾಶದಲ್ಲಿ ಕಾಕ್‌ಪಿಟ್ ರಣರಂಗ!

ವಿಮಾನವು ಮುಂಜಾನೆ ದುಬೈನಿಂದ ಟೆಲ್ ಅವೀವ್ ಕಡೆಗೆ ಹಾರಾಟ ನಡೆಸುತ್ತಿದ್ದಾಗ, ಇಸ್ರೇಲ್ ಗಡಿಯಿಂದ ಕೆಲವೇ ನೂರು ಮೈಲುಗಳ ದೂರದಲ್ಲಿ ಈ ಘಟನೆ ಸಂಭವಿಸಿದೆ. ಒಮಾನ್ ಮೂಲದ ಸಹ-ಪೈಲಟ್ ಇದ್ದಕ್ಕಿದ್ದಂತೆ ಕಾಕ್‌ಪಿಟ್‌ನಲ್ಲೇ ಮುಖ್ಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾ+ಕುವಿನಿಂದ ಇ+ರಿದು ಮಾರ+ಣಾಂತಿಕ ಹ+ಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ವಿಮಾನವನ್ನು ಅಪಹರಿಸಿ ನೆಲಕ್ಕೆ ಅಪ್ಪಳಿಸುವ (ಕ್ರಾಶ್ ಮಾಡುವ) ದುರುದ್ದೇಶದಿಂದ ಕಂಟ್ರೋಲ್ ಸಿಸ್ಟಮ್ ಅಸ್ತವ್ಯಸ್ತಗೊಳಿಸಿ, ವಿಮಾನವನ್ನು ಕೇವಲ 30 ಸೆಕೆಂಡುಗಳಲ್ಲಿ ಸುಮಾರು 14,000 ಅಡಿಗಳಷ್ಟು ದಿಢೀರ್ ಕೆಳಕ್ಕೆ ಬೀಳಿಸಿದ್ದಾನೆ.

​ರ+ಕ್ತಸಿ+ಕ್ತ ಸ್ಥಿತಿಯಲ್ಲೂ ಮೆರೆದ ಅದಮ್ಯ ಸಾಹಸ: ಮಾರ+ಣಾಂತಿಕ ಇರಿ+ತದಿಂದ ತೀವ್ರವಾಗಿ ಗಾ+ಯಗೊಂಡು ರ+ಕ್ತಸಿ+ಕ್ತರಾಗಿದ್ದರೂ ಧೃತಿಗೆಡದ ಕ್ಯಾಪ್ಟನ್ ಸ್ಮಿತ್, ದಾಳಿಕೋರ ಸಹ-ಪೈಲಟ್‌ನೊಂದಿಗೆ ಭೀಕರವಾಗಿ ಹೋರಾಡಿದ್ದಾರೆ. ಈ ನಡುವೆ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ವಿಮಾನದ ಹಠಾತ್ ಕುಸಿತ ಹಾಗೂ ಕಾಕ್‌ಪಿಟ್‌ನಲ್ಲಿದ್ದ ಗದ್ದಲವನ್ನು ಗಮನಿಸಿದ ಸಿಬ್ಬಂದಿ, ಪ್ರಯಾಣಿಕರಲ್ಲಿದ್ದ ಫಿಜಿ ಮೂಲದ ಮತ್ತೊಬ್ಬ ಪೈಲಟ್ ಹಾಗೂ ಇಸ್ರೇಲಿ ಪ್ರಯಾಣಿಕರು ತಕ್ಷಣ ಧಾವಿಸಿ ದಾಳಿಕೋರನನ್ನು ಕಟ್ಟಿಹಾಕಿ ನಿಯಂತ್ರಣಕ್ಕೆ ತಂದಿದ್ದಾರೆ.

​ತೀ+ವ್ರ ರ+ಕ್ತಸ್ರಾವದ ನಡುವೆಯೂ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮತ್ತೊಬ್ಬ ಪೈಲಟ್ ನೆರವಿನೊಂದಿಗೆ ವಿಮಾನವನ್ನು ಸ್ಥಿರಗೊಳಿಸಿ, ಏರ್ ಟ್ರಾಫಿಕ್ ಕಂಟ್ರೋಲ್‌ಗೆ (ATC) ಎಮರ್ಜೆನ್ಸಿ ಸಂದೇಶ ರವಾನಿಸಿದ್ದಾರೆ. ಬಳಿಕ ಸೌದಿ ಅರೇಬಿಯಾದ ತಬೂಕ್ (Tabuk) ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಯಶಸ್ವಿಯಾಗಿ ತುರ್ತು ಭೂಸ್ಪರ್ಶ ಮಾಡಿಸುವ ಮೂಲಕ ಭಾರೀ ದುರಂತವನ್ನು ತಪ್ಪಿಸಿದ್ದಾರೆ.

​ಜಾಗತಿಕ ಮಟ್ಟದಲ್ಲಿ ಭಾರೀ ಪ್ರಶಂಸೆ: ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಸುಮಾರು 166 ಮಂದಿ ಇಸ್ರೇಲಿ ಪ್ರಜೆಗಳಾಗಿದ್ದರು. ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಬಳಿಕ ಅವರನ್ನು ಮತ್ತೊಂದು ವಿಶೇಷ ವಿಮಾನದ ಮೂಲಕ ಟೆಲ್ ಅವೀವ್‌ಗೆ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ. ದಾಳಿಕೋರ ಪೈಲಟ್‌ನನ್ನು ಸೌದಿ ಅರೇಬಿಯಾದ ಭದ್ರತಾ ಪಡೆಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿವೆ. ಘಟನೆಯನ್ನು ಗಂಭೀರ ಭಯೋತ್ಪಾದನಾ ಕೃತ್ಯದ ಸಂಚು ಎಂದು ಪರಿಗಣಿಸಲಾಗಿದ್ದು, ಜೀವದ ಹಂಗು ತೊರೆದು ನೂರಾರು ಅಮಾಯಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಸಾಹಸಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

​ಯಾರು ಈ ಹೀರೋ ಸ್ಮಿತ್ ಮಚ್ಚಾರ್?: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ವಾಣಿಜ್ಯ ವಿಮಾನಯಾನ ಕ್ಷೇತ್ರದಲ್ಲಿ 13 ವರ್ಷಗಳಿಗೂ ಹೆಚ್ಚು ಸುದೀರ್ಘ ಅನುಭವ ಹೊಂದಿದ್ದಾರೆ. ಈ ಹಿಂದೆ ಭಾರತದ ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್‌ನಲ್ಲಿ ಸೇವೆ ಸಲ್ಲಿಸಿದ್ದ ಅವರು, ಬೋಯಿಂಗ್ 737 ವಿಮಾನಗಳಲ್ಲಿ ಸುಮಾರು 9,750 ಗಂಟೆಗಳ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. 2022ರಲ್ಲಿ ಅವರು ಫ್ಲೈದುಬೈ ಸಂಸ್ಥೆಗೆ ನೇರ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದರು.


Share It

You cannot copy content of this page