ಬೆಳಗಾವಿ: ಗಾಳಿಪಟದ ಮಾಂಜಾ ದಾರ ಬೈಕ್ ಚಲಾಯಿಸುತ್ತಿದ್ದ ಯುವಕನ ಕೊರಳಿಗೆ ಸಿಲುಕಿದ್ದರಿಂದ ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಲ್ಲಿನ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿಯ ಬ್ರಿಡ್ಜ್ ಮೇಲೆ ಗುರುವಾರ ನಡೆದಿದೆ.
ಇಲ್ಲಿಯ ಮಹಾಂತೇಶ ನಗರದ ಧ್ರುವ ಸಂತೋಷ ಕರ್ಜಗಿ(19) ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ರಾಷ್ಟ್ರೀಯ ಹೆದ್ದಾರಿ ಬಳಿಯ ಬ್ರಿಡ್ಜ್ ಕಡೆಯಿಂದ ಪಲ್ಸರ್ ಬೈಕ್ ಮೇಲೆ ಮಹಾಂತೇಶ ನಗರದ ಕಡೆಗೆ ಹೊರಟಿದ್ದ ಯುವಕ ದ್ರುವಾ ಕರ್ಜಗಿಯ ಕೊರಳಿಗೆ ಮಾಂಜಾ ದಾರ ಸಿಲುಕಿಕೊಂಡಿದೆ. ಕುತ್ತಿಗೆ ಸಂಪೂರ್ಣವಾಗಿ ಬಿಗಿದು ರಕ್ತಸ್ರಾವವಾಗಿ ಯುವಕ ಸ್ಥಳದಲ್ಲಿಯೇ ಬೈಕ್ ಮೇಲೆ ಕುಳಿತಲ್ಲಿಯೇ ಮೃತಪಟ್ಟಿದ್ದಾನೆ. ಬೆಳಗಾವಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
