ಬೆಂಗಳೂರು: ಏಷ್ಯನ್ ಗೇಮ್ಸ್ ನ ಮಹಿಳೆಯರ 4*400 ಮೀಟರ್ ರಿಲೇ ಚಿನ್ನದ ಪದಕ ಹಾಗೂ ಮಿಶ್ರ ರಿಲೇ ಯಲ್ಲಿ ಬೆಳ್ಳಿಯ ಪದಕ ಗೆದ್ದ ಕರ್ಮಾಟಕ ಅಥ್ಲೀಟ್ ಎಂ ಆರ್ ಪೂವಮ್ಮ ಅವರಿಗ ಅಭಿನಂದನೆ ಸಲ್ಲಿಯುವ ಭರದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ.
ಚಿನ್ನ ಗೆದ್ದು ಬಂದ ಅಥ್ಲೀಟ್ ಗೆ ರಾಜ್ಯ ಸರಕಾರ ಕನಿಷ್ಠ ಗೌರವ ಸಲ್ಲಿಕೆ ಮಾಡಲಿಲ್ಲ ಎನ್ಸು ಸ್ವತ ಅಥ್ಲೀಟ್ ಪೂವಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಲಾಭ ಪಡೆಯಲು ಹೋಗಿ ಅವರೊಂದಿಗೆ ಕರೆ ಮಾಡಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಆಕೆಗೆ ಅಭಿನಂದನೆ ಸಲ್ಲಿಸಿದ್ದರು. ಇದೆ ಆಡಿಯೋ ವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿ ಹಾಕಿದ್ದಾರೆ. ಈ ವೇಳೆ ಭಾರತ ರಾಷ್ಟ್ರಧ್ವಜದ ಬದಲಿಗೆ ಮತ್ತೊಂದು ದೇಶದ ಧ್ವಜ ಬಳಸಿದ್ದಾರೆ.
ಕುಮಾರಸ್ವಾಮಿ ಅವರ ಯಡವಟ್ಟನ್ನು ಗುರುತಿಸಿ ತಕ್ಷಣವೇ ಅನೇಕ ನೆಟ್ಟಿಗರು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ಕೆಲವರು ದೇಶ ಪ್ರೇಮದ ಪಾಠ ಹೇಳುವ ಬಿಜೆಪಿ ಮಿತ್ರ ಪಕ್ಷ ದೇಶದ ರಾಷ್ಟ್ರ ಧ್ವಜವನ್ನೇ ಬದಲಾಯಿಸಿದೆ ವೆಂಡು ಕಿಡಿಕಾರಿದ್ದಾರೆ. ಆದರೆ, ಆನಂತರದ ಎಲ್ಲ ಟ್ವೀಟ್ ಗಳಲ್ಲಿ ಭಾರತದ ಧ್ವಜ ಬಳಸಿರುವ ಎಚ್ಡಿಕೆ, ಆ ಟ್ವೀಟ್ ನಲ್ಲಿ ಮಾತ್ರ ಧ್ವಜ ಬದಲಾಯಿಸಿಲ್ಲ. ಇದು ಆಕ್ರೋಶಕ್ಕೂ ಕಾರಣವಾಗಿದೆ.
