ಫ್ಯಾಷನ್ ಸಿನಿಮಾ ಸುದ್ದಿ

BBK13: ಗಾನವಿಗೆ ಕಿಚ್ಚ ಸುದೀಪ್ ಖಾರ ಉತ್ತರ – “ನಾನೇನು ನೋಡಬೇಕು ಎನ್ನುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ”

Share It

ಬಿಗ್ ಬಾಸ್ ಕನ್ನಡ 13ರ ಮನೆಯಲ್ಲಿ ವಾರದ ಕತೆ ರೋಚಕವಾಗಿ ಸಾಗಿದ್ದು, ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮತ್ತು ಸುದೀಪ್ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ. ವಿಶೇಷವಾಗಿ ಗಾನವಿ ಅವರ ಮಾತಿಗೆ ಕಿಚ್ಚ ಸುದೀಪ್ ಗರಂ ಆಗಿದ್ದು, ಕೆಲ ಹೊತ್ತು ವೇದಿಕೆ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್

ಇತ್ತೀಚೆಗಷ್ಟೇ ಮನೆಗೆ ಎಂಟ್ರಿ ಕೊಟ್ಟಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಗಾನವಿ, ಪ್ರಶಾಂತ್ ಹಾಗೂ ಸೋನಿಕಾ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ಸುದೀಪ್ ಪ್ರಶ್ನೆ ಮಾಡಿದರು. “ಗೇಮ್ ಚೇಂಜ್ ಮಾಡುತ್ತೇನೆ ಅಂತ ಮನೆಯೊಳಗೆ ಹೋದವರು ಏನು ಮಾಡುತ್ತಿದ್ದಾರೆ?” ಎಂದು ಕೇಳಿದರು. ನೀವು ಯಾರೂ ಇಲ್ಲದಿದ್ರೂ ನಾವು ಶೋ ನಡೆಸುತ್ತೇವೆ. ನಿಮ್ಮ ಮಾತು, ವ್ಯಕ್ತಿತ್ವಗಳಿಗೆ ನೀವೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.

ಗಾನವಿ – ಕಾವ್ಯ ನಡುವೆ ವಾಗ್ವಾದ

ಸುದೀಪ್ ಅವರ ಮುಂದೆಯೇ ಗಾನವಿ ಹಾಗೂ ಕಾವ್ಯ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಯಾರನ್ನು ಕಾಂಪಿಟೇಷನ್ ಎಂದು ಭಾವಿಸುತ್ತೀರಿ ಎಂದು ಸುದೀಪ್ ಕೇಳಿದಾಗ, ಗಾನವಿ ಅವರು ಕಾವ್ಯ ಅವರ ಹೆಸರು ಹೇಳಿದರು. ಇದಕ್ಕೆ ಕಾವ್ಯ ಪ್ರತಿಕ್ರಿಯಿಸಿ, “ಅವರು ನನ್ನ ಜತೆ ಗೇಮ್ ಆಡೇ ಇಲ್ಲ. ಮೊದಲ ಟಾಸ್ಕ್ನಲ್ಲಿ ಮಾತ್ರ ನಾವು ಆಡಿದ್ದೇವೆ. ತುಂಬಾ ರೀಸನ್ ಕೊಡುತ್ತಾ ಇದ್ದೀರಿ” ಎಂದು ಹೇಳಿದರು.

“ನೀವು ಸರಿಯಾಗಿ ನೋಡಿದ್ರೆ..” – ಕಿಚ್ಚ ಗರಂ

ಟಾಸ್ಕ್ ಎಲ್ಲಿ ತಪ್ಪಾಯಿತು ಎಂದು ಸುದೀಪ್ ಪ್ರಶ್ನಿಸಿದಾಗ, ಗಾನವಿ ಅವರು “ನೀವು ಸರಿಯಾಗಿ ನೋಡಿದ್ರೆ.. ಕ್ಲಿಯರ್ ಆಗಿ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ” ಎಂದು ಹೇಳಿದರು. ಈ ಮಾತನ್ನು ಕೇಳಿ ಕಿಚ್ಚ ಸುದೀಪ್ ಆಕ್ರೋಶಗೊಂಡರು.

“ನಾನೇನು ನೋಡಬೇಕು ಎನ್ನುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ. ಅದನ್ನು ನಿಮಗೆ ಹೇಳಬೇಕಂತಿಲ್ಲ. ನನಗೆ ಸುಮ್ಮನೆ ಬಿಗ್ ಬಾಸ್ ದುಡ್ಡು ಕೊಟ್ಟು ಕರೆಯಲ್ಲ. ನಾನು ಎಲ್ಲವನ್ನೂ ನೋಡಿಯೇ ಮಾತನಾಡೋದು. ನನಗೆ ಸುಮ್ಮನೆ ದುಡ್ಡು ಕೊಟ್ಟು ಇಲ್ಲಿಗೆ ಕರ್ಕೊಂಡು ಬಂದಿದ್ದಾರೆ ಅಂದುಕೊಂಡಿದ್ದೀರಾ?” ಎಂದು ಸುದೀಪ್ ಖಾರವಾಗಿ ಹೇಳಿದರು.

“ಗೌರವವಿಲ್ಲದಿದ್ರೆ ಮನೆಗೆ ಹೋಗಿ”

“ನಿಮಗೆ ಯಾರಿಗೂ ತಾಳ್ಮೆ ಇಲ್ಲದಿದ್ರೆ, ದಯವಿಟ್ಟು ಮನೆಗೆ ಹೋಗಿ. ನಾನೇ ಬಾಗಿಲು ಓಪನ್ ಮಾಡಿಸುತ್ತೇನೆ. ಗೌರವವಿಲ್ಲದಿದ್ರೆ ದಯವಿಟ್ಟು ಮನೆಗೆ ಹೋಗಿ. ನಿಮ್ಮ ಬೇಸರವನ್ನು ನಮ್ಮ ಮೇಲೆ ತೋರಿಸಬೇಡಿ. ಶೋಗೆ ಗೌರವ ಕೊಡಿ” ಎಂದು ಸುದೀಪ್ ಎಚ್ಚರಿಕೆ ನೀಡಿದರು. ಇದರಿಂದ ಕಿಚ್ಚ ಕೆಲ ಹೊತ್ತು ವೇದಿಕೆ ಬಿಟ್ಟು ಹೋದರು.

ಈ ವಾರ ಲಿಖಿತ್ ಔಟ್?

ಇದೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಮುಂದುವರಿದಿದ್ದು, ಒಟ್ಟು 6 ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ನಾಲ್ವರು ಕಾಮನ್ ಮ್ಯಾನ್ಗಳೇ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ವಾರ ಲಿಖಿತ್ ಅವರು ಮನೆಯಿಂದ ಔಟ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಲಿಖಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫನ್ನಿ ವಿಡಿಯೋಸ್ ಮಾಡಿ ಫೇಮ್ ಆಗಿದ್ದರು. ‘ಕಾಮನ್ ಮ್ಯಾನ್’ ಆಗಿ ಆಗ್ನಿ ಪರೀಕ್ಷೆ ಗೆದ್ದು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು.

ಒಟ್ಟಿನಲ್ಲಿ, ಈ ವಾರದ ಬಿಗ್ ಬಾಸ್ ಎಪಿಸೋಡ್ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮತ್ತು ಸುದೀಪ್ ನಡುವಿನ ಜಟಾಪಟಿಯಿಂದ ಸಾಕಷ್ಟು ಸದ್ದು ಮಾಡಿದೆ.


Share It

You cannot copy content of this page