ಅಪರಾಧ ರಾಜಕೀಯ ಸುದ್ದಿ

ದೆಹಲಿ ಪೊಲೀಸರಿಗೆ ಮುಖಭಂಗ : ಪ್ರತಿಭಟನೆಗೆ ಹತ್ತಿಕ್ಕುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್

Waqf Act: Petitions filed in Supreme Court challenging its validity; hearing likely on 16th
Share It

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯ ಹತ್ತಿಕ್ಕುವ ದೆಹಲಿ ಪೊಲೀಸರಿಗೆ ಮುಖಭಂಗವಾಗಿದ್ದು, ಪ್ರತಿಭಟನೆ ತಡೆಯಲು ಪೊಲೀಸರಿಗೆ ಯಾವುದೇ ವಿಶೇಷ ಅಧಿಕಾರ ನೀಡಲು ನಿರಾಕರಿಸಿದೆ.

ಪ್ರತಿಭಟನಾಕಾರರು ಯುವ ವಿದ್ಯಾರ್ಥಿಗಳು, ಅವರನ್ನು ತಡೆಯಲು ಪೊಲೀಸರು ತೆಗೆದುಕೊಳ್ಳುತ್ತಿರುವ ಕ್ರಮಗಳು ಸರಿಯಲ್ಲ, ಮೆಟ್ರೋ, ರೈಲು ಸೇವೆಗಳ ಸಂಪೂರ್ಣ ನಿಲುಗಡೆ ಸ್ವೀಕಾರಾರ್ಹವಲ್ಲ ಎಂದು ಎಚ್ಚರಿಕೆ ನೀಡಿದೆ.

ಅಕ್ಟೋಬರ್ 10ರಂದು ನಡೆಯುವ ಪ್ರತಿಭಟನೆಯನ್ನು ತಡೆಯಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಜತೆಗೆ, ಮೆಟ್ರೋ, ರೈಲು ಸಂಚಾರವನ್ನು ತಡೆದು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡದಂತೆ ಎಚ್ಚರಿಕೆ ನೀಡಿದೆ.

ದೆಹಲಿಗೆ ತಲುಪುವ ರೈಲುಗಳನ್ನು ತಡೆದು, ಅದರಲ್ಲಿದ್ದ ವಿದ್ಯಾರ್ಥಿಗಳನ್ನು ಕೆಳಗಿಳಿಸುವ ಪ್ರಯತ್ನವನ್ನು ದೆಹಲಿಯ ಹೊರವಲಯದಲ್ಲಿ ಪೊಲೀಸರು ಮಾಡಿದ್ದರು. ಈ ಕುರಿತು ಅನೇಕ ವಿಡಿಯೋಗಳು ವೈರಲ್ ಆಗಿದ್ದವು. ಜತೆಗೆ, ಜಂತರ್-ಮಂತರ್ ವ್ಯಾಪ್ತಿಯ ಹತ್ತು ಮೆಟ್ರೋ ನಿಲ್ದಾಣಗಳನ್ನು ಮುಚ್ಚುವ ತೀರ್ಮಾನವನ್ನು ಪೊಲೀಸರು ತೆಗೆದುಕೊಂಡಿದ್ದರು.


Share It

You cannot copy content of this page