ರಾಂಚಿ : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿದರೂ, ಅದನ್ನು ಬೆನ್ನಟ್ಟಿ ಗೆಲುವು ಸಾಧಿಸುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಗಿದೆ.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲಿಗೆ ಬೌಲಿಂಗ್ ಮಾಡುವ ಅವಕಾಶವನ್ನು ಪಡೆದುಕೊಂಡಿತು. ಭಾರತದ ಪರ ಆರಂಭಿಕರಾದ ಅಭಿಶೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಆರಂಭವನ್ನೇ ನೀಡಿದರು. ಮೊದಲ ವಿಕೆಟ್‌ಗೆ ಕೇವಲ 3 ಓವರ್‌ಗಳಲ್ಲಿ 42 ರನ್‌ಗಳನ್ನು ಪೇರಿಸಿದ್ದಾಗ 20 ರನ್‌ಗಳಿಸಿದ್ದ ಅಭಿಶೇಕ್ ಶರ್ಮಾ ಔಟ್ ಆದರು.
ಅನಂತರ ಸಂಜು ಸ್ಯಾಮ್ಸನ್ ತಮ್ಮ ಎಂದಿನ ಲಯದಲ್ಲಿ ಬ್ಯಾಟ್ ಬೀಸಿದರು. ಅವರು ಕೇವಲ 41 ಸೆತಗಳಲ್ಲಿ 82 ರನ್‌ಗಳನ್ನು ಗಳಿಸಿ ಔಟಾದರು. ಅದರಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳಿದ್ದವು. ಅನಂತರ ಬಂದ ಇಶಾನ್ ಕಿಶನ್ ಎರಡು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಹಿತ ಕೇವಲ 22 ಎಸೆತಗಳಲ್ಲಿ 43 ರನ್ ಗಳಿಸಿದರು.
ಅನಂತರ ಬಂದ ಶಿವಂ ದುಬೆ ಕೇವಲ 7 ರನ್ ಗಳಿಸಿ ಔಟಾದರೆ, ಶ್ರೇಯಸ್ ಅಯ್ಯರ್ 18 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 40 ರನ್‌ಗಳಿಸಿದರು. ತಿಲಕ್ ವರ್ಮಾ ಕೂಡ 18 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸಿ, 44 ರನ್‌ಗಳನ್ನು ಗಳಿಸಿದರು. ಒಟ್ಟಾರೆ ಭಾರತ ತಂಡ 249 ರನ್‌ಗಳನ್ನು ಪೇರಿಸಿತ್ತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್‌ಗೆ ಆರಂಭದಲ್ಲಿಯೇ ಆಘಾತ ಎದುರಾದರೂ, ನಾಯಕ ಶಾಯ್ ಹೋಪ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಆರಂಭಿಕರಾದಿ ಬಂದ ಅವರು, 45 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ ಆರು ಬೌಂಡರಿಗಳ ಸಹಿತಿ 102 ರನ್‌ಗಳಿಸಿ ಅಜೇಯರಾಗಿಯೇ ಉಳಿದು ಪಂದಯವನ್ನು ಗೆಲ್ಲಿಸಿದರು. ಅವರಿಗೆ ಸಾಥ್ ನೀಡಿದ ಶೇರ್ಪೆನ್ ರುದರ್‌ಫೋರ್ಡ್ 37 ಎಸೆತಗಳಲ್ಲಿ ಏಳು ಸಿಕ್ಸರ್ ಮತ್ತು ಏಳು ಬೌಂಡರಿ ಸಹಿತ 84 ರನ್‌ಗಳಿಸಿದರು.
ಆದರೆ, ಕೊನೆಯಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ ರೊಮಾರಿಯೋ ಶೆಫರ್ಡ್ ಮಿಂಚಿನ ಬ್ಯಾಟಿಂಗ್ ನಡೆಸಿ, 13 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ 34 ರನ್‌ಗಳಿಸುವ ಮೂಲಕ 18.3 ಓವರ್‌ಗಳಲ್ಲಿಯೇ 252 ರನ್‌ಗಳಿಸಿ, ಭಾರತದ ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆಲುವು ಸಾಧಿಸಲು ನೆರವಾದರು. ಮಯಾಂಕ್ ಯಾದವ್ ಮೂರು ವಿಕಿಕ್ ಪಡೆದು ಮಿಂಚಿದರು.
