ನವದೆಹಲಿ: ಜಂತರ್ ಮಂತರ್ ಪ್ರತಿಭಟನೆ ತಡೆಗೆ ಸರಕಾರ ಏನೇ ಸರ್ಕಸ್ ನಡೆಸಿದರೂ, ಯೋಗೇಂದ್ರ ಯಾದವ್ ಮತ್ತು ನೇಹಾ ಬೋರಾ ನೇತೃತ್ವದಲ್ಲಿ ಮೆರವಣಿಗೆ ಆರಂಭವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಸರಕಾರ ಕಾಕ್ರೋಚ್ ಜನತಾ ಪಾರ್ಟಿಯ ಮೂವರು ಪ್ರಮುಖ ನಾಯಕರಾದ ದೀಪ್ಕೆ, ಸೌರವ್ ದಾಸ್, ಮತ್ತು ರಾಂಕಾ ಅವರನ್ನು ಬಂಧನ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ನಾಯಕತ್ವದ ಕೊರತೆ ಕಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಹೇಗೋ ಪ್ರತಿಭಟನೆ ಸ್ಥಳ ತಲುಪಿದ ಯೋಗೇಂದ್ರ ಯಾದವ್ ಮತ್ತು ನೇಹಾ ಬೋರಾ ಪ್ರತಿಭಟನೆ ನೇತೃತ್ವ ವಹಿಸಿದ್ದು, ವಿದ್ಯಾರ್ಥಿಗಳ ನೇತೃತ್ವ ವಹಿಸಿದ್ದಾರೆ.
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ ಮತ್ತು ಪ್ರತಿಭಟನೆ ತಡೆದ ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿ ಅವರ ನಡೆಯ ವಿರುದ್ಧ ಪ್ರತಿಭಟನೆ ಕೂಗುತ್ತಾ ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆ ನಡೆಸುತ್ತಿದ್ದಾರೆ. ಈ ನಡುವೆ ರೈಲ್ವೆ, ಬಸ್‌ಗಳನ್ನು ತಡೆದಿರುವುದರಿಂದ ಹೊರವಲಯದಿಂದ ಬೈಕ್, ಆಟೋ ಮೊದಲಾದ ವಾಹನಗಳಲ್ಲಿ ಜಂತರ್ ಮಂತರ್ ತಲುಪುವ ಪ್ರಯತ್ನವನ್ನು ಸಾವಿರಾರು ಯುವಕರು ಮಾಡುತ್ತಿದ್ದಾರೆ.
