ಉಪಯುಕ್ತ ಸುದ್ದಿ

ಹೊಳಲ್ಕೆರೆ: ಇಂದಿರಾ ಕ್ಯಾಂಟೀನ್ ಪುನರಾರಂಭಕ್ಕೆ ಒತ್ತಾಯಿಸಿ ರೈತಸಂಘದಿಂದ ಪ್ರತಿಭಟನೆ

Share It

ಹೊಳಲ್ಕೆರೆ: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಖಂಡಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಹೊಳಲ್ಕೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

“ಅಡುಗೆ ಸಿಬ್ಬಂದಿಗಳಿಗೆ 4 ತಿಂಗಳಿನಿಂದ ನೀಡಬೇಕಾದ ವೇತನ ನೀಡಿಲ್ಲ, ಕ್ಯಾಂಟೀನ್ ಕಾಂಟ್ರಾಕ್ಟ್ ಪಡೆದಿರುವ ದುರ್ಗದ ಚೇತನ್ ಅಡುಗೆ ಸಾಮಾನು, ಗ್ಯಾಸ್, ಅನ್ನ ಸರಿಯಾಗಿ ನೀಡುತ್ತಿಲ್ಲ. ಆದ್ದರಿಂದ ಹೊಳಲ್ಕೆರೆಯ ಈ ಇಂದಿರಾ ಕ್ಯಾಂಟೀನ್ ಅನ್ನು ತಿಂಗಳಿಗೆ 4 ಬಾರಿ ಮುಚ್ಚುತ್ತಾರೆ” ಎಂದು ರೈತ ಸಂಘದ ಸದಸ್ಯರು ಮತ್ತು ಹಸಿರು ಸೇನೆಯ ಕಾರ್ಯಕರ್ತರು ಕಿಡಿಕಾರಿದರು.

ಇಷ್ಟಾದರೂ ಹೊಳಲ್ಕೆರೆ ಪಟ್ಟಣದಲ್ಲಿ ಈಗಾಗಲೇ ಬಂದು ಕಾಂಗ್ರೆಸ್ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವ ಮಾಜಿ ಸಚಿವ ಹಾಗೂ ಹಿಂದೆ ಹೊಳಲ್ಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಎಚ್.ಆಂಜನೇಯ ಅವರ ಅಗಲದ ಅಥವಾ ಯಾವುದೇ ಆಡಳಿತ ಪಕ್ಷದ ಕಾಂಗ್ರೆಸ್ ಜನಪ್ರತಿನಿಧಿಗಳಾಗಲಿ ಅಥವಾ ಮುಖಂಡರಾಗಲಿ ಮುಚ್ಚಿರುವ ಹೊಳಲ್ಕೆರೆ ತಾಲ್ಲೂಕು ಕಚೇರಿ ಎದುರಿನ ರಾಜ್ಯಸರ್ಕಾರದ ಇಂದಿರಾ ಕ್ಯಾಂಟೀನ್ ಅನ್ನು ಇನ್ನಾದರೂ ಸಾರ್ವಜನಿಕರಿಗೆ ಪುನರಾರಂಭಿಸಲು ಒತ್ತಡ ಹೇರುವ ಕೆಲಸವನ್ನೇ ಮಾಡಿಲ್ಲ!


Share It

You cannot copy content of this page