ರಾಜಕೀಯ ಸುದ್ದಿ

ಬೆಂಗಳೂರು ನಗರ ಪದವೀದರ ಕ್ಷೇತ್ರ; ಬಿಜೆಪಿಗೆ ಬಂಡಾಯದ ಬಿಸಿ; ಪಕ್ಷೇತರ ಅಭ್ಯರ್ಥಿಯಾಗಿ ಎಂ.ಪುಟ್ಟಸ್ವಾಮಿ ಕಣಕ್ಕೆ

Share It

ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ‌ ಪಕ್ಷೇತರ ಅಭ್ಯರ್ಥಿಯಾಗಿ ವಿನೋದ್ ಶಿವರಾಜ್ ನಾಮಪತ್ರ ಸಲ್ಲಿಕೆ.

ಬೆಂಗಳೂರು ಮೇ 15; ವಿಧಾನ ಪರಿಷತ್ ಚುನಾವಣೆಯ ಬೆಂಗಳೂರು ನಗರ ಪದವೀದರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಪುಟ್ಟಸ್ವಾಮಿ ಬೆಂಗಳೂರಿನ ಶಾಂತಿನಗರ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಪಾರ. ಅಭಿಮಾನಿಗಳು,ಪದವೀಧರ ಮತದಾರರು ಭಾಗವಹಿಸಿದ್ದರು.

ಬಳಿಕ ಮಾತನಾಡಿದ ಎಂ.ಪುಟ್ಟಸ್ವಾಮಿ,ನಮ್ಮ ಎದುರಾಳಿಗಳಾಗಿ ಘಟಾನುಘಟಿಗಳು ಸ್ಪರ್ದೆ ಮಾಡಿರುವ ಹಿನ್ನಲೆಯಲ್ಲಿ ನಮ್ಮ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲಾಗುವುದು,ಈ ಭಾರೀ ಶತಗತಾಯ ಗೆಲುವು ಸಾಧಿಸಲು ಅವಿರತ ಶ್ರಮವಹಿಸಲಾಗುವುದು ಪದವೀದರರ ಪರವಾಗಿ ರಾಜ್ಯ ಸರ್ಕಾರದಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಜಾರಿತರಲು ಪ್ರಯತ್ನಿಸಲಾಗುವುದು, ಸರ್ಕಾರದ ಮಟ್ಟದಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ಭರ್ತಿಗಾಗಿ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಲಾಗುವುದು ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಎಂ.ಪುಟ್ಟಸ್ವಾಮಿ ಬೆಂಗಳೂರು ನಗರ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ತೀವ್ರ ಪೈಪೋಟಿ ನಡೆಸಿದ್ದರು, ಆದರೆ ಕೊನೆ ಗಳಿಗೆಯಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಅವರಿಗೆ ಟಿಕೇಟ್ ಲಭಿಸಿದೆ. ಅಸಮಾಧಾನಗೊಂಡಿರುವ ಎಂ.ಪುಟ್ಟಸ್ವಾಮಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕೂಡ ಘಟಾನುಘಟಿಗಳ ತೀವ್ರ ಪೈಪೋಟಿ ಆರಂಭವಾಗಿದ್ದು,ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ‌ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ಗುರುತಿಸಿ ಕೊಂಡಿರುವ “ವಿನೋದ್ ಶಿವರಾಜ್” ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಇಂದು ನಾಮಪತ್ರ ಸಲ್ಲಿಸಿದರು, ಈ
ರುಕ್ಸಾ ಅಧ್ಯಕ್ಷ ಲೇಪಾಕ್ಷಿ, ರಾಮು ಮತ್ತಿತರರು ಭಾಗವಹಿಸಿದ್ದರು.

ಗ್ರಾಮೀಣ ಮತ್ತು ನಗರ ಶಿಕ್ಷಕರ ಘದ ಅಧ್ಯಕ್ಷ (ರುಕ್ಸಾ) ಅಧ್ಯಕ್ಷ ಲೇಪಾಕ್ಷಿ ಮಾತನಾಡಿ, ಶಿಕ್ಷಕರ ಸದಾ ಸ್ಪಂದಿಸುವ,ಶಿಕ್ಷಕರನ್ನು ಗೌರವದಿಂದ ಕಾಣುವ ವ್ಯಕ್ತಿಗಳ ಅಗತ್ಯವಿದ್ದು,ನಗುಮೊಖದ ಸಮಾಜ ಸೇವಾ ಕಾರ್ಯದಲ್ಲಿ ಗುರುತಿಸಿಕೊಂಡಿರುವ ವಿನೋದ್ ಶಿವರಾಜ್ ಸೂಕ್ತ ವ್ಯಕ್ತಿಯಾಗಿದ್ದು, ಐದು ಜಿಲ್ಲೆಗಳ‌ ಶಿಕ್ಷಕರು ಬೆಂಬಲಿಸಬೇಕೆಂದು ಮನವಿ ಮಾಡಿದರು.


Share It

You cannot copy content of this page