ಮುಂಬೈ: ಖ್ಯಾತ ಬಾಲಿವುಡ್ ಹಾಗೂ ಮರಾಠಿ ನಟ ನಾನಾ ಪಾಟೇಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಾನಾ ಪಾಟೇಕರ್ ವಿಭಿನ್ನ ರೀತಿಯ ಪಾತ್ರಗಳಿಂದ ಬಾಲಿವುಡ್ ಮತ್ತು ಮರಾಠಿ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದರು. ಜತೆಗೆ ಅನೇಕ ಸಮಾಜ ಮುಖಿ ಚಿಂತನೆಗಳ ಮೂಲಕ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅವರು ಮುರುದ್ ಎಂಬ ಸ್ಥಳದಲ್ಲಿ 1951 ರಲ್ಲಿ ಜನಿಸಿದ್ದರು.
ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದ ಅವರು, ನಟನೆಯಲ್ಲಿ ಸಹಜ ಅಭಿನಯದ ಮೂಲಕ ಮನೆಮಾತಾಗಿದ್ದರು. ಗೋವಾದಲ್ಲಿ ಅವರು ಇಂದು ಬೆಳಗಿನ ಜಾವ5.30ಕ್ಕೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ
