ಉಪಯುಕ್ತ ರಾಜಕೀಯ ಸುದ್ದಿ

ಚುನಾವಣೆ ಮಧ್ಯೆ ರಾಹುಲ್ ಗಾಂಧಿ ಗಡ್ಡ ಕೆರೆದನಿಗೆ ಮಿಠಾಯಿ,

Share It

ರಾಯ್‌ಬರೇಲಿ: ಗಡ್ಡ ಎಳೆದವನಿಗೆ ಮಿಠಾಯಿ ಅನ್ನೋ ಕಥೆಯನ್ನೇ ನಾವೆಲ್ಲ ಕೇಳಿಯೇ ರ‍್ತೇವೆ. ಆದರೆ, ಇದು ಹೊಸ ಮಿಠಾಯಿ ಕತೆ, ಚುನಾವಣೆ ರಾಹುಲ್ ಗಾಂಧಿ ಚುನಾವಣೆ ಪ್ರಚಾರದ ವೇಳೆ ಸಲೂನ್‌ವೊಂದಕ್ಕೆ ಭೇಟಿ ಮಾಡಿ, ತಮ್ಮ ಗಡ್ಡವನ್ನು ಟ್ರಿಮ್ ಮಾಡಿಸಿಕೊಂಡಿದ್ದರು. ಆ ಸಲೂನ್ ಮಾಲೀಕನಿಗೀಗ ಸಿಹಿಯೋ ಸಿಹಿ.

ಸಿಹಿ ಎಂದರೆ, ಸ್ವೀಟಲ್ಲ, ಬದಲಾಗಿ, ರಾಹುಲ್ ಗಾಂಧಿ ಗಡ್ಡ ಕೆರೆದ ಕ್ಷೌರಿಕನಿಗೀಗ ಫುಲ್ ಡಿಮ್ಯಾಂಡ್. ಗಿರಾಕಿಗಳಿಲ್ಲದೆ ನೊಣ ಹೊಡೆಯುತ್ತಿದ್ದ ಆತನೀಗ ಫುಲ್ ಟೈಂ ಬ್ಯುಸಿಯಾಗಿದ್ದಾನೆ. ರಾಯ್‌ಬರೇಲಿ ಜಿಲ್ಲೆಯ ಲಾಲ್‌ಗಂಜ್ ಪಟ್ಟಣದ ಮಿಥುನ್ ಕುಮಾರ್ ಎಂಬಾತನೇ ಸಧ್ಯಕ್ಕೆ ಫುಲ್ ಬ್ಯುಸಿಯಾಗಿರುವ ಸಲೂನ್ ಮಾಲೀಕ.

ನ್ಯೂ ಮುಂಬಾದೇವಿ ಹೇರ್ ಕಟಿಂಗ್ ಸಲೂನ್‌ನಲ್ಲಿ ರಾಹುಲ್ ಗಾಂಧಿ ಗಡ್ಡ ಟ್ರಿಮ್ ಮಾಡಿಸಿಕೊಂಡಿದ್ದರು. ಸದ್ಯ ರಾಹುಲ್ ಭೇಟಿ ಬೆನ್ನಲ್ಲೇ ಸಲೂನ್ ಮಾಲೀಕನಿಗೆ ಅದೃಷ್ಟ ಖುಲಾಯಿಸಿದೆ. ಇಡೀ ದಿನ ಸಲೂನ್‌ಗೆ ಗ್ರಾಹಕರು ಭೇಟಿ ನೀಡುತ್ತಲೇ ಇದ್ದು, ಭಾರೀ ಡಿಮ್ಯಾಂಡ್ ಹೆಚ್ಚಾಗಿದೆ.

ಗಡ್ಡ ಟ್ರಿಮ್ ಮಾಡಿಸಿಕೊಳ್ಳುವಾಗ ರಾಹುಲ್ ಗಾಂಧಿ ಸಲೂನ್ ಮಾಲೀಕ ಮಿಥುನ್ ಕುಮಾರ್ ಅವರೊಂದಿಗೆ ಸಂಭಾಷನೆ ನಡೆಸಿದ್ರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸಲೂನ್ ಈಗ ಭಾರೀ ಜನ ಪ್ರಿಯವಾಗಿದ್ದು, ಜನ ಭೇಟಿ ನೀಡುತ್ತಲೇ ಇದ್ದಾರೆ.


Share It

You cannot copy content of this page