ಬೆಂಗಳೂರು: ಐಪಿಎಲ್ ಪೈನಲ್ ಪಂದ್ಯ ನೀರಸವಾಗಿ ಮುಗಿದು, ಕೊಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯಾವಳಿಗೂ ಮುನ್ನ ನಡೆದಿದ್ದ ಮಹಿಳಾ ಐಪಿಎಲ್ ಪೈನಲ್ ಮತ್ತು ಈ ಫೈನಲ್ ನಡುವೆ ಅನೇಕ ಸಾಮ್ಯತೆಗಳಿವೆ.
ಮಹಿಳಾ ಐಪಿಎಲ್ ಫೈನಲ್ ಪಂದ್ಯದಲ್ಲಿ ದಕ್ಷಿಣದ ಒಂದು ತಂಡ ಮತ್ತು ಉತ್ತರದ ಒಂದು ತಂಡ ಭಾಗವಹಿಸಿದ್ದವು. ಪುರುಷರ ಫೈನಲ್ ಕೂಡ ಅದೇ ಫಾರ್ಮೆಟ್ ನಲ್ಲಿತ್ತು. ಎರಡು ಕಪ್ ಗೆದ್ದ ತಂಡದ ನಾಯಕರು ಕೂಡ ಭಾರತೀಯ ಆಟಗಾರರೇ ಆಗಿದ್ದಾರೆ. ರನ್ನರ್ ಅಪ್ ತಂಡದ ಕ್ಯಾಪ್ಟನ್ ಗಳು ಆಸ್ಟ್ರೇಲಿಯಾ ಆಟಗಾರರು ಅನ್ನೋದು ವಿಶೇಷ.
ಎರಡು ಪಂದ್ಯಗಳನ್ನು ಚೇಸಿಂಗ್ ಮಾಡಿದ ತಂಡವೇ ಗೆದ್ದುಕೊಂಡಿದ್ದು, ಮೊದಲು ಬ್ಯಾಟ್ ಮಾಡಿದ್ದ ತಂಡ ಎರಡು ಪಂದ್ಯಗಳಲ್ಲಿ18.3 ಓವರ್ ಗಳಿಗೆ ಆಲೌಟ್ ಆಗಿತ್ತು. ಎರಡು ತಂಡಗಳು ಗಳಿಸಿದ್ದ ರನ್ ಕೂಡ 113/10 ಆಗಿತ್ತು ಎಂಬುದು ವಿಶೇಷ.
ಇನ್ನು ರನ್ ಚೇಸ್ ಮಾಡಿದ ಎರಡು ತಂಡದ ನಾಯಕರು ಭಾರತೀಯ ಆಟಗಾರರೇ ಆಗಿದ್ದು, ನೀಡಿದ್ದ ಟಾರ್ಗೆಟ್ ಎರಡು ವಿಕೆಟ್ ಕಳೆದುಕೊಂಡು ಚೇಸ್ ಮಾಡಿ ಎಂಟು ವಿಕೆಟ್ ಗಳ ಅಂತರದ ಗೆಲುವು ಸಾಧಿಸಿದ್ದು ವಿಶೇಷ.
ಇನ್ನೂ,ಎರಡು ಫೈನಲ್ ಪಂದ್ಯದಲ್ಲಿ ಪ್ಲೇಯರ್ ಆಪ್ ದಿ ಮ್ಯಾಚ್ ಎನಿಸಿಕೊಂಡಿದ್ದು ಆಸ್ಟ್ರೇಲಿಯಾ ಆಟಗಾರರು. ಅದೂ ಎರಡು ಪಂದ್ಯಗಳಲ್ಲಿ ಬೌಲಿಂಗ್ ವಿಭಾಗಕ್ಕೆ ಪ್ಲೇಯರ್ ಆಪ್ ದಿ ಮ್ಯಾಚ್ ಪ್ರಶಸ್ತಿ ಸಿಕ್ಕಿರುವುದು ವಿಶೇಷ. ಎರಡು ಪಂದ್ಯಗಳಲ್ಲಿಯೂ ‘ನಿತಿನ್ ಮೆನನ್’ ಅಂಪೈರ್ ಆಗಿದ್ದು ಕೂಡ ವಿಶೇಷವೇ.
ಕಪ್ ಗೆದ್ದ ಇಬ್ಬರು ಕ್ಯಾಪ್ಟನ್ ಗಳು ಕೂಡ ಮುಂಬಯಿ ಮೂಲದ ಆಟಗಾರರು, ಶ್ರೇಯಸ್ ಅಯ್ಯರ್ ಮುಂಬಯಿ ರಣಜಿ ತಂಡವನ್ನು ಪ್ರತಿನಿಧಿಸಿದರೆ, ಸ್ಮೃತಿ ಮಂದನಾ ಮಹಾರಾಷ್ಟ್ರ ಮಹಿಳಾ ತಂಡವನ್ನು ಪ್ರತಿನಿಧಿಸುತ್ತಾರೆ.
2024 WPL ಫೈನಲ್
- ಆಸ್ಟ್ರೇಲಿಯಾ ಕ್ಯಾಪ್ಟನ್ v/s ಭಾರತದ ಕ್ಯಾಪ್ಟನ್
- ಆಸ್ಟ್ರೇಲಿಯಾ ನಾಯಕನಿಂದ ಬ್ಯಾಟಿಂಗ್ ಆಯ್ಕೆ
- ತಂಡದ ಮೊತ್ತ 18.3 ಓವರ್ ಗಳಲ್ಲಿ113/10
- ಭಾರತದ ನಾಯಕರ ತಂಡಕ್ಕೆ 8 ವಿಕೆಟ್ ಗೆಲುವು
2024 ರ IPL ಫೈನಲ್
- ಆಸ್ಟ್ರೇಲಿಯಾ ಕ್ಯಾಪ್ಟನ್ v/s ಭಾರತದ ಕ್ಯಾಪ್ಟನ್
- ಆಸ್ಟ್ರೇಲಿಯಾ ಕ್ಯಾಪ್ಟನ್ ಬ್ಯಾಟಿಂಗ್ ಆಯ್ಕೆ
- ತಂಡದ ಮೊತ್ತ 18.3 ಓವರ್ ಗಳಲ್ಲಿ 113/10
- ಭಾರತದ ನಾಯಕರ ತಂಡಕ್ಕೆ 8 ವಿಕೆಟ್ ಗೆಲುವು