ಬೆಂಗಳೂರು: ಭಾರತೀಯ ಯೂಟ್ಯೂಟ್ ಸೆನ್ಸೇಷನ್ ಕಟೆಂಟ್ ಕ್ರಿಯೇಟರ್ ಧ್ರುವ್ ರಾಥಿ ಬೆಂಗಳೂರಿಗೆ ಆಗಮಿಸಿದ್ದು, ಕಾಕ್ರೋಚ್ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ, ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಗೆ ಯೂಟ್ಯೂಬರ್ ಧ್ರುವ್ ರಾಥಿ ಆಗಮಿಸುತ್ತಿರುವುದು ಅಚ್ಚರಿ ಮೂಡಿಸಿದೆ.
ಜರ್ಮನಿಯಲ್ಲಿ ನೆಲೆಸಿರುವ ಯೂಟ್ಯೂಬರ್ ರಾಥಿ, ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧದ ತಮ್ಮ ಕಟೆಂಟ್ ಗಳ ಮೂಲಕ ದೇಶದಲ್ಲಿ ಸದ್ದು ಮಾಡಿದ್ದರು. ಅವರು ನರೇಂದ್ರ ಮೋದಿ ಅವರ ಬಗ್ಗೆ ಮಾಡಿದ್ದ ವಿಡಿಯೋಗಳು ಕೋಟ್ಯಂತರ ವೀಕ್ಷಣೆ ಪಡೆದು, ಅವರು ದೇಶಾದ್ಯಂತ ಮನೆಮಾತಾಗಿದ್ದರು.
ಇದೀಗ ಕಾಕ್ರೋಚ್ ಪಾರ್ಟಿಯ ಪ್ರತಿಭಟನೆಯಲ್ಲಿ ಅವರು ಭಾಗವಹಿಸುತ್ತಿದ್ದು, ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯಲಿದೆ. ನಟ ಪ್ರಕಾಶ್ ರಾಜ್, ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಹೋರಾಟಗಾರ್ತಿ ನೇಹಾ ಬೋರಾ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
