ರಾಜಕೀಯ ಸುದ್ದಿ

ಮತದಾನಕ್ಕೆ ತೆರಳುವವರಿಗೆ ದುಬಾರಿ ಬಸ್ ದರ ತಡೆ!

Share It

ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಇದೇ ಮೇ 7 ಮಂಗಳವಾರ ನಡೆಯಲಿದೆ.

ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ, ಬಳ್ಳಾರಿ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರಗಳಿಗೆ ಮೇ 7 ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಈ 14 ಲೋಕಸಭಾ ಕ್ಷೇತ್ರಗಳ ಮತದಾರರು ತಮ್ಮ ಮತ ಚಲಾಯಿಸಲು ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಮೇ 6 ಸೋಮವಾರ ಪ್ರಯಾಣ ಮಾಡಲು ಮುಂದಾಗಿದ್ದಾರೆ. ಆದರೆ ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ರಾಜ್ಯದ ಖಾಸಗಿ ಬಸ್ ಮಾಲೀಕರು 2ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ತೆರಳುವ ಮತದಾರರಿಗೆ ಎರಡು ಪಟ್ಟು ಬಸ್ ಪ್ರಯಾಣ ದರ ಏರಿಕೆ ಮಾಡಿದ್ದಾರೆ.

ಇದರಿಂದ ಬೆಂಗಳೂರು ನಗರದಿಂದ ಹೊರಡುವ ಬೀದರ್, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಮತದಾರರು ಸಾವಿರಾರು ರೂಪಾಯಿ ಕೊಟ್ಟು ಪ್ರಯಾಣ ಮಾಡಿ ಮತ ಚಲಾಯಿಸಲು ಹಿಂಜರಿಯುತ್ತಿದ್ದಾರೆ. ಕಾರಣ ಮತ ಚಲಾಯಿಸಿ ಮತ್ತೆ ವಾಪಸ್ ಬರಲು ಬಸ್ ಪ್ರಯಾಣ ಕೊಡಬೇಕು, ಹೀಗಾಗಿ ನಮಗೆ ಬರೋಬ್ಬರಿ ಮತದಾನ ಮಾಡಲು 2 ರಿಂದ 3 ಸಾವಿರ ರೂಪಾಯಿ ರೊಕ್ಕ ಬೇಕು ಎಂದು ಮತ ಚಲಾಯಿಸಲು ಹಿಂದೇಟು ಹಾಕಿದ್ದಾರೆ.

ಸರ್ಕಾರಿ ಬಸ್ ಗಳು ಫುಲ್ ರಶ್!: ಹೌದು, ಈ ಮಾತು ಖರೇ ಇದೆ. ಯಾಕಂದರೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಸ್ವಾಮ್ಯದ ಬಸ್ ಗಳಲ್ಲಿ ಮಹಿಳೆಯರಿಗೆ, ಯುವತಿಯರಿಗೆ, ವಿದ್ಯಾರ್ಥಿನಿಯರಿಗೆ ಹಾಗೂ ಬಾಲಕಿಯರಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ಇದೆ. ಈ ಅವಕಾಶ ಬಳಸಿ ಮಹಿಳೆಯರು ಬೆಂಗಳೂರು, ಮಂಗಳೂರು ಸೇರಿದಂತೆ ಎಲ್ಲಾ ಭಾಗಗಳಿಂದ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಈಗಾಗಲೇ ಸೋಮವಾರ ಬಸ್ ಟಿಕೆಟ್ ಬುಕ್ ಮಾಡಿದ್ದಾರೆ.

ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಪುರುಷ ನಾಗರಿಕರು, ಯುವಕರು ಸೋಮವಾರ ಸಾರಿಗೆ ಬಸ್ ಗಳ ಟಿಕೆಟ್ ಖರೀದಿಸಿ ಸೀಟ್ ಬುಕ್ ಮಾಡಿದ್ದಾರೆ. ಹಾಗಾಗಿ ಉಳಿದ ಪುರುಷ ಮತದಾರರು ತಮ್ಮ ಊರುಗಳಲ್ಲಿ ಮತದಾನ ಮಾಡಲು ಅನಿವಾರ್ಯವಾಗಿ ಖಾಸಗಿ ಬಸ್ ಗಳನ್ನೇ ಮೆಚ್ಚಿಕೊಂಡಿದ್ದಾರೆ. ಆದರೆ ಖಾಸಗಿ ಬಸ್ ಗಳ ಟಿಕೆಟ್ ದರ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ. ನಮಗೆ ನಮ್ಮ ವೋಟ್ ಹಾಕಲು ಯಾವುದೇ ಪಕ್ಷದ ಅಭ್ಯರ್ಥಿ 2 ಅಥವಾ 3 ಸಾವಿರ ರೂಪಾಯಿ ಖರ್ಚು ಮಾಡಿ ಬಸ್ ಟಿಕೆಟ್ ಕೊಡಿಸಲ್ಲ, ಆದ್ದರಿಂದ ಈ ಬಾರಿ ನಾವು ವೋಟ್ ಹಾಕೋದೇ ಬೇಡ ಎಂದು ಖಡಕ್ ತೀರ್ಮಾನ ಕೈಗೊಂಡಿದ್ದಾರೆ‌.

ಆದರೆ ಚುನಾವಣಾ ಆಯೋಗ ಮತ್ತು ಸ್ವೀಪ್ ಸಮಿತಿ ಮತದಾನ ಹೆಚ್ಚಳಕ್ಕೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಮತದಾರರಿಗೆ ಮತದಾನದ ಹಕ್ಕಿನ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸುತ್ತಿದೆ. ಇಷ್ಟಾದರೂ ನಾವು ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಸ್ ಚಾರ್ಜ್ ಕೊಟ್ಟು ಮತದಾನ ಮಾಡಬೇಕು.

ಜೊತೆಗೆ ಮತದಾನ ಮುಗಿಸಿ ವಾಪಸ್ ಬರಲು ಬೇಕಾಗುವ ಬಸ್ ದರ ದುಬಾರಿಯಾದರೆ ನಾವು ಖಾಸಗಿ ಬಸ್‌ ಗಳ ಟಿಕೆಟ್ ಹೇಗೆ ಕೊಂಡು ವಾಪಸ್ ಬರಲು ಪ್ರಯಾಣ ಬೆಳೆಸಲು ಹೇಗೆ ಸಾಧ್ಯ? ಎಂದು ಮುಂದಾಲೋಚನೆ ಮಾಡಿ ಅನಿವಾರ್ಯವಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ಹಿಂದೇಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದ ಸಾರಿಗೆ ಇಲಾಖೆ ಅನಿವಾರ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್ ಗಳನ್ನು ಮತದಾರರಿಗೋಸ್ಕರ ಬಿಡಬೇಕು ಎಂದು 2ನೇಋ ಹಂತದ 14 ಕ್ಷೇತ್ರಗಳ ಮತದಾರರು ಆಗ್ರಹಿಸಿದ್ದಾರೆ.


Share It

You cannot copy content of this page