ಅಪರಾಧ ಸುದ್ದಿ

ತವರು ಮನೆಗೆ ೨ ಕೋಟಿ ಕೋಟ್ಟಳೆಂದು ಕೊಂದೇ ಬಿಟ್ಟ ಗಂಡ

Share It

ನೆಲಮಂಗಲ: ಹಣ ಮನುಷ್ಯನನ್ನು ಏನೆಲ್ಲ ಮಾಡಿಸುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ, ತಮ್ಮ ಕುಟುಂಬದ ಹಣವನ್ನು ತವರು ಮನೆಗೆ ಸಾಗಿಸಿದ್ದಾಳೆಂಬ ಅನುಮಾನದಲ್ಲಿ ಗಂಡ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಪ್ರಕರಣ ಇತ್ತೀಚೆಗೆ ವರದಿಯಾಗಿದೆ.

ನೆಲಮಂಗಲ ತಾಲೂಕಿನ ಗೊಟ್ಟಿಗೆರೆ ಗ್ರಾಮದ ಶ್ರೀನಿವಾಸ್ ಎಂಬಾತ ತನ್ನ ಮಡದಿ ಜಯಲಕ್ಷ್ಮಿ ಯನ್ನು ಕೊಲೆ ಮಾಡಿದ್ದಾನೆ. ಈತನಿಗೆ ಭೂ ಸ್ವಾಧೀನಕ್ಕೆ ಒಳಗಾಗಿದ್ದ ಜಮೀನಿಗೆ ಸಂಬಂಧಿಸಿದಂತೆ 2 ಕೋಟಿಗೂ ಹೆಚ್ಚು ಹಣ ಪರಿಹಾರ ರೂಪದಲ್ಲಿ ಬಂದಿತ್ತು, ಈ ಹಣವನ್ನು ಪತ್ನಿ ತವರು ಮನೆಗೆ ಕಳುಹಿಸಿದ್ದಾಳೆಂದು ಕುಪಿತಗೊಂಡ ಗಂಡ ಆಕೆಯನ್ನು ಹತ್ಯೆ ಮಾಡಿದ್ದಾನೆ.

ಎರಡು ಕೋಟಿ ರು.ಗೂ ಅಧಿಕ ಹಣವನ್ನು ತವರು ಮನೆಯವರಿಗೆ ನೀಡಿರುವ ಕುರಿತು ಹೆಂಡಿಯೊಂದಿಗೆ ನಿತ್ಯ ಕಿರಿಕ್ ಮಾಡಿಕೊಳ್ಳುತ್ತಿದ್ದ ಶ್ರೀನಿವಾಸ್, ಜಗಳದ ನಡುವೆ ಆವೇಶದಲ್ಲಿ ಮಚ್ಚಿನಿಂದ ಕೊಚ್ಚಿ ಹೆಂಡಿತನ್ನು ಕೊಲೆ ಮಾಡಿದ್ದಾನೆ. ಕುಡಿದ ನಶೆಯಲ್ಲಿ ಆತ ಕೊಲೆ ಮಾಡಿ, ಶವವನ್ನು ಹೂತು ಹಾಕಲು ಗುಂಡಿ ತೆಗೆಯುವ ಪ್ರಯತ್ನ ನಡೆಸುತ್ತಿದ್ದಾಗ ಆತನ ಮಕ್ಕಳು ಅದನ್ನು ಕಂಡಿದ್ದಾರೆ.

ಮಕ್ಕಳನ್ನು ಬೆದರಿಸಿ, ಯಾರಿಗೂ ವಿಷಯ ತಿಳಿಸದಂತೆ ಎಚ್ಚರಿಕೆ ನೀಡಿದ ಆತನ ಯಾರಿಗಾದರೂ ಹೇಳಿದರೆ ಮಕ್ಕಳನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ. ಆದರೆ, ತಾಯಿಯನ್ನು ಕಳೆದುಕೊಂಡ ಮಕ್ಕಳು, ತಾಯಿಯ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಆಗ ಆಕೆಯ ಸಂಬಂಧಿಕರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಈ ಸಂಬಂಧ ದಾಬಸ್ ಪೇಟೆ ಪೊಲೀಸರು ಶ್ರೀನಿವಾಸ್‌ನನ್ನು ಬಂಧಿಸಿದ್ದಾರೆ.

ದಾಬಸ್ ಪೇಟೆ ಕೈಗಾರಿಕಾ ಪ್ರದೇಶಕ್ಕೆ ಶ್ರೀನಿವಾಸ್ ಅವರ 1 ಎಕರೆ ಜಮೀನನನ್ನು ಭೂ ಸ್ವಾಧೀನಕ್ಕೆ ಒಳಪಡಿಸಿಕೊಳ್ಳಲಾಗಿತ್ತು, ಇದಕ್ಕೆ ಪರಿಹಾರ ರೂಪದಲ್ಲಿ ಸರಕಾರ 2 ಕೋಟಿಗೂ ಅಧಿಕ ಹಣವನ್ನು ನೀಡಿತ್ತು. ಈ ಹಣದಲ್ಲಿ ಬಹುಪಾಲು ಹಣವನ್ನ ಹೆಂಡತಿ ತವರು ಮನೆಗೆ ಕಳುಹಿಸಿದ್ದಾಳೆ ಎಂಬುದು ಗಂಡ ಶ್ರೀನಿವಾಸನ ಆರೋಪ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ನಿತ್ಯ ಗಂಡ ಹೆಂಡತಿ ನಡುವೆ ಜಗಳವಾಗುತ್ತಿದ್ದು, ಕೋಪದಲ್ಲಿ ಕೊಲೆ ಮಾಡಿದ ಗಂಡ ಜೈಲು ಸೇರಿದ್ದಾನೆ. ಮಕ್ಕಳು ತಾಯಿ ಮತ್ತು ತಂದೆಯನ್ನು ಕಳೆದುಕೊಂಡು ಅನಾಥವಾಗಿವೆ.


Share It

You cannot copy content of this page