ಮೈಸೂರು ;ಯತೀಂದ್ರ ಅವರನ್ನು ಹೈಕಮಾಂಡ್‌ನವರು ಎಂಎಲ್‌ಸಿ ಮಾಡುವುದಾಗಿ ಹೇಳಿದ್ದರು.
ಕಾದು ನೋಡಬೇಕು. ನಿಮ್ಮನ್ನು ಎಮ್‌ಎಲ್‌ಸಿ ಮಾಡುತ್ತೇವೆ, ನಿಮ್ಮ ತಂದೆಯವರಿಗೆ ಕ್ಷೇತ್ರ
ಬಿಟ್ಟು ಕೊಡಿ ಅಂತ ಯತೀಂದ್ರ ಅವರಿಗೆ ಹೈಕಮಾಂಡ್ ಹೇಳಿತ್ತು. ವರಿಷ್ಠರ ಮಾತಿಗೆ ತಲೆ
ಬಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ನಾನು ಕೋಲಾರದಿಂದ ಸ್ಪರ್ಧಿಸಬೇಕು ಅಂದುಕೊ0ಡಿದ್ದೆ. ಇಲ್ಲ ನೀವು ವರುಣಾದಿಂದ ಸ್ಪರ್ಧೆ
ಮಾಡಿ ಅಂತ ಹೈಕಮಾಂಡ್ ಹೇಳಿದರು. ಯತೀಂದ್ರ ಅವರನ್ನು ಎಮ್‌ಎಲ್‌ಸಿ ಮಾಡುತ್ತಾರಾ
ಕಾದು ನೋಡಬೇಕು ಎಂದರು.
ಸರ್ಕಾರ ೪೦ ಪೋನ್‌ಗಳನ್ನು ಟ್ಯಾಪ್ ಮಾಡಿದೆ ಎಂಬ ಮಾಜಿ ಸಿಎಂ ಹೆಚ್ಡಿಕೆ ಆರೋಪಕ್ಕೆ
ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಡಿವೋರ್ಟ್
ಮಾಡಲು ಕುಮಾರಸ್ವಾಮಿಯವರು ಎನೇನೋ ಮಾತನಾಡುತ್ತಿದ್ದಾರೆ. ಮತ್ತು ಅವರು ಕಾನೂನಿಗೆ
ಗೌರವ ಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.