ಹಾಸನ: ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸದಿರುವ ಸರಕಾರದ ಕ್ರಮವನ್ನು ಖಂಡಿಸಿ, ವಿವಿಧ ಸಂಘಟನೆಗಳು ಹಾಸನ್ ಚಲೋ ನಡೆಸಲು ತೀರ್ಮಾನಿಸಿವೆ.
ಮೇ.೩೦ಕ್ಕೆ ಸಾಹಿತಿಗಳು, ಚಿಂತಕರು, ಪ್ರಗತಿಪರ ಮುಖಂಡರು, ಮಹಿಳಾ ಹೋರಾಟಗಾರರನ್ನೊಳಗೊಂಡ ಬಳಗ ಹಾಸನದಲ್ಲಿ ಪ್ರತಿಭಟನೆ ನಡೆಸಲಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಗುರುತರ ಆರೋಪಗಳಿದ್ದರೂ, ಅವರಿಂದಾಗಿ ನೂರಾರು ಮಹಿಳೆಯರು ನೊಂದಿದ್ದರೂ, ಅವರ ಬಂಧನ ಮಾಡುವಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ, ಸರಕಾರವನ್ನು ಹೊತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಗಳ ಮುಖ್ಯಸ್ಥ ಧರ್ಮೇಶ್ ತಿಳಿಸಿದ್ದಾರೆ.
ವಿವಿಧ ದಲಿತ ಸಂಘಟನೆಗಳು, ಪ್ರಗತಿಪರ ಚಿಂತಕರು, ಮಹಿಳಾ ಹೋರಾಟಗಾರರು, ಮಾನವ ಬಂಧುತ್ವ ವೇದಿಕೆ, ಭೀಮ್ ಆರ್ಮಿ, ಜನವಾದಿ ಸಂಘಟನೆ, ಸಮತಾ ವೇದಿಕೆಗಳು,ಸುಮಾರು 50 ಕ್ಕೂ ಅಧಿಕ ಸಂಗಟನೆಗಳು ಹೋರಾಟದಲ್ಲಿ ಭಾಗವಹಿಸಲು ಈಗಾಗಲೇ ತೀರ್ಮಾನಿಸಿವೆ. ಮುಂದೆ ಮತ್ತಷ್ಟು ಸಂಘಟನೆಗಳು ಮುಖಂಡರು ತಾವಾಗಿಯೇ ಹೋರಾಟವನ್ನು ಕೂಡಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.