ಅಪರಾಧ ರಾಜಕೀಯ ಸುದ್ದಿ

ಕೆಲಸ ಮಾಡ್ತಿದೆ‌ ಸಿಎಂ ಬರೆದ ಪತ್ರ:ಪ್ರಜ್ವಲ್ ಗೆ ವಿದೇಶಾಂಗ ಸಚಿವಾಲಯದ ಶೋಕಾಸ್ ನೊಟೀಸ್

Share It


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಪತ್ರ ಕೆಲಸ ಮಾಡಿದ್ದು, ಇದೀಗ ವಿದೇಶಾಂಗ ಸಚಿವಾಲಯ ಶೋಕಾಸ್ ನೊಟೀಸ್ ನೀಡಿದೆ.

ಲೈಂಗಿಕ ದೌರ್ಜನ್ಯ ಆರೋಪವಿದ್ದರೂ, ಪ್ರಜ್ವಲದ ರೇವಣ್ಣ ವಿದೇಶದಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬ್ಲೂ ಕಾರ್ನರ್ ನೊಟೀಸ್ ನೀಡಲಾಗಿತ್ತು. ಆದರೆ, ಪ್ರಜ್ವಲ್ ಈವರೆಗೆ ಎಸ್ಐಟಿ ಮುಂದೆ ಶರಣಾಗಿರಲಿಲ್ಲ. ಹೀಗಾಗಿ, ಅವರ ಪಾಸ್ ಪೋರ್ಟ್ ರದ್ದು ಮಾಡಬೇಕು ಎಂದು ಎಸ್ಐಟಿ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿತ್ತು.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಆ ಮೂಲಕ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ನಡೆಸಿದ್ದರು.

ಕೇಂದ್ರ ಸರಕಾರ ಸಿಎಂ ಮನವಿಗೆ ಸ್ಪಂದಿಸಿ, ಪ್ರಜ್ವಲ್ ಬಂಧನಕ್ಕೆ ಸಹಕಾರ ನೀಡುವುದು ಅನಿವಾರ್ಯ ಆಗಿದೆ. ಒಂದು ವೇಳೆ ಬಂಧನವಾದರೆ, ತಮ್ಮದೇ ಮೈತ್ರಿ ಪಕ್ಷದ ಸಂಸದರೊಬ್ಬರ ಮೇಲೆ ಇಂತಹ ಕ್ರಮ ತೆಗೆದು
ಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ‌.
ಪ್ರಜ್ವಲ್ ರೇವಣ್ಣ ಇದೀಗ ಕೇಂದ್ರ ಸರಕಾರಕ್ಕೂ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ನಡುವೆ ಮಾಜಿ ಪ್ರಧಾನಿ ದೇವೇಗೌಡ, ಪ್ರಜ್ವಲ್ ಅವರಿಗೆ ಶರಣಾಗುವಂತೆ ತಾಕೀತು ಮಾಡಿದ್ದಾರೆ. ತಮ್ಮ ತಾಳ್ಮೆ ಕೆಣಕುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

ದೇವೇಗೌಡರ ಎಚ್ಚರಿಕೆಯ ನಡುವೆಯೂ ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಸ್ ಆಗದೆ ಇರುವುದು ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಇದು ಅನಿವಾರ್ಯ

ವಾಗಿ ಕೇಂದ್ರ ಸರಕಾರದ ಹಸ್ತಕ್ಷೇಪಕ್ಕೆ ಆಹ್ವಾನ ಕೊಟ್ಟಂತಾಗಿದೆ.

ಈಗ ವಿದೇಶಾಂಗ ಸಚಿವಾಲಯ ನೀಡಿರುವ ನೊಟೀಸ್ ಮಹತ್ವ ಪೇದುಕೊಂಡಿದ್ದು, ಇದಕ್ಕೆ ಪ್ರಜ್ವಲ್ ರೇವಣ್ಣ ಹತ್ತು ದಿನಗಳಲ್ಲಿ ಉತ್ತರ ಕೊಡಲೇಬೇಕು. ವಿದೇಶದಿಂದ ಯಾವಾಗ ವಾಪಸ್ ಆಗ್ತಾರೆ ಎಂಬುದನ್ನು ಹೇಳಬೇಕು.

ಪಾಸ್ ಪೋರ್ಟ್ ಯಾಕೆ ರದ್ದು ಮಾಡಬಾರದು ಎಂಬುದಕ್ಕೆ ಸಮಜಾಯಿಷಿ ಕೊಡಬೇಕು. ಇಲ್ಲವಾದಲ್ಲಿ, ಪಾಸ್ ಪೋರ್ಟ್ ರದ್ದಾಗುತ್ತದೆ. ಆಗ ಅನಿವಾರ್ಯವಾಗಿ, ಅವರಿರುವ ದೇಶದಲ್ಲೇ ಬಂಧನಕ್ಕೊಳಗಾಗಬೇಕಾಗುತ್ತದೆ.


Share It

You cannot copy content of this page