ಮೈಸೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣ ಬಿಡದಿದ್ದರೆ, ಸಿಎಂ ಸಿದ್ದರಾಮಯ್ಯ ಪಕ್ಷ ತೊರೆಯುವ ಬೆದರಿಕೆ ಹಾಕಿದ್ದರೆ? ಹೀಗೊಂದು ವಿವಾದವನ್ನು ಇದೀಗ ಹುಟ್ಟುಹಾಕಲಾಗುತ್ತಿದೆ.
ಈ ಹೇಳಿಕೆಯನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟುಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಕುಮಾರಸ್ವಾಮಿ ಅವರು, ಬೇರೆ ಸಮುದಾಯದ ಏಳಿಗೆಯನ್ನು ಸಹಿಸದ ಮುಖ್ಯಮಂತ್ರಿ ಸಇದ್ದರಾಮಯ್ಯ ಅವರು, ತಾವು ದಲಿತೋದ್ಧಾರಕ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿದ್ದರೆ, ಮುಖ್ಯಮಂತ್ರಿ ಸ್ಥಾನ ಕೈತಪ್ಪುತ್ತದೆ ಎಂಬುದನ್ನು ಅರಿತು, ಅವರು ದೆಹಲಿಗೆ ಹೋಗುವಂತೆ ನೋಡಿಕೊಂಡಿದ್ದು ವಿಪಯರ್ಾಸ ಎಂದರು.
ಕಾಂಗ್ರೆಸ್ ದಲಿತರನ್ನು ದತ್ತು ತೆಗೆದುಕೊಂಡಂತೆ ಮಾತನಾಡುವ ಪಕ್ಷ. ಆದರೆ, ಸಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರು, ಸಿಎಂ ಆಗಿಬಿಡುತ್ತಾರೆ ಎಂಬ ಉದ್ದೇಶದಿಂದ ಅವರನ್ನು ದೆಹಲಿ ರಾಜಕಾರಣದ ಕಡೆಗೆ ಮುಖ ಮಾಡುವಂತೆ ಮಾಡಲಾಯಿತು. ಅವರು ದೆಹಲಿಗೆ ಹೋಗದಿದ್ದರೆ, ಇಂದಿನ ಸಿಎಂ ಸಿದ್ದರಾಮಯ್ಯ ಅವರು ಪಕ್ಷವನ್ನು ಬಿಡಲು ಸಜ್ಜಾಗಿದ್ದರು. ಈ ಬೆದರಿಕೆ ಮೂಲಕವೇ ಅವರು, ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ, ತಾವು ಹಿಂದುಳಿದ, ದಲಿತ ವರ್ಗಗಳನ್ನು ಉದ್ಧಾರ ಮಾಡುತ್ತಿರುವುದಾಗಿ ಶೋ ಕೊಡುತ್ತಿದ್ದಾರೆ ಎಂದು ಟೀಕಿಸಿದರು.