ಧರ್ಮಶಾಲಾ: ವಿರಾಟ್ ಕೋಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಆ ಮೂಲಕ ತನ್ನ ಪ್ಲೇ ಆಪ್ ಕನಸನ್ನು ಜೀವಂತವಾಗಿರಿಸಿಕೊAಡಿದೆ.
241 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ 181 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಶರಣಾಯಿತು. ಇನ್ನಿಂಗ್ಸ್ನ ಮೊದಲ ಓವರ್‌ನಲ್ಲೇ ಸ್ವಪ್ನಿಲ್ ಸಿಂಗ್ ಆರ್‌ಸಿಬಿಗೆ ಬ್ರೇಕ್ ಥ್ರೂ ತಂದುಕೊಟ್ಟರು. ಪ್ರಭುಸಿಮ್ರಾನ್ ಸಿಂಗ್ ಅವರನ್ನು 6 ರನ್‌ಗೆ ಔಟ್ ಮಾಡುವ ಮೂಲಕ ಗೆಲುವಿನ ಆಸೆ ಚಿಗುರಿಸಿದರು.
ಆನಂತರ ಜೊತೆಯಾದ ಜಾನಿ ಬಿಸ್ಟ್ರೋ ಮತ್ತು ರೀಲಿ ರೋಸೋ 65 ರನ್‌ಗಳ ಭರ್ಜರಿ ಜತೆಯಾಟ ನಡೆಸಿದರು. ಜಾನಿ ಬಿಸ್ಟ್ರೋ 16 ಎಸೆತಗಳಲ್ಲಿ 27 ರನ್‌ಗಳಿಸಿ ಔಟಾದರೆ, ರೀಲಿ ರೋಸೋ 27 ಎಸೆತಗಳಲ್ಲಿ ಭರ್ಜರಿ ಅರ್ಧಶತಕಗಳಿಸಿ 61 ರನ್‌ಗಳಿಗೆ ಔಟಾದರು. ಉಳಿದಂತೆ ಶಶಾಂಕ್ ಸಿಂಗ್ ಮತ್ತು ನಾಯಕ ಸ್ಯಾಮ್ ಕರಣ್ ಹೊರತುಪಡಿಸಿ ಮತ್ಯಾರು ಎರಡಂಕಿ ಮೊತ್ತವನ್ನು ದಾಟಲಿಲ್ಲ. ಕಡೆಯದಾಗಿ ಪಂಜಾಬ್ ತಂಡ 181 ರನ್‌ಗಳಿಗೆ ಆಲೌಟ್ ಆಯಿತು.
ಆರ್‌ಸಿಬಿ ಬೌಲಿಂಗ್ ವಿಭಾಗ ಶಿಸ್ತುಬದ್ಧ ದಾಳಿ ನಡೆಸಿ ಪಂಜಾಬ್ ತಂಡವನ್ನು ಆಲೌಟ್ ಮಾಡುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿತು. ಮೊಹಮದ್ ಸಿರಾಜ್ ಮೂರು ವಿಕೆಟ್ ಪಡೆದರೆ, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ ಮತ್ತು ಲೂಕಿ ಪರ್ಗ್ಯುಸನ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಕಿಂಗ್ ಕೋಹ್ಲಿ ಆರ್ಭಟ: ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ವಿರಾಟ್ ಕೋಹ್ಲಿ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತ ಕಲೆ ಹಾಕಿತು. ನಾಯಕ ಡುಪ್ಲೆಸಿಸ್ ಮತ್ತು ವಿಲ್ ಜಾಕ್ಸ್ ವಿಕೆಟ್ ಬೇಗನೆ ಕಳೆದುಕೊಂಡರೂ, ಕೋಹ್ಲಿ ಮತ್ತು ರಜತ್ ಪಾಟೀದಾರ್ ಇನ್ನಿಂಗ್ಸ್ ಕಟ್ಟಿದರು. ಪಾಟೀದಾರ್ 23 ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್‌ಗಳೊಂದಿಗೆ 55 ರನ್‌ಗಳಿಸಿದರೆ, ಕೋಹ್ಲಿ 47 ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್‌ಳೊಂದಿಗೆ 92 ಎನ್ ಗಳಿಸಿದರು. ಕೊನೆಯಲ್ಲಿ ಗ್ರೀನ್ ಮತ್ತು ದಿನೇಶ್ ಕಾರ್ತಿಕ್ ಅಬ್ಬರಿಸುವ ಮೂಲಕ ಮೊತ್ತವನ್ನು 241ಕ್ಕೇರಿಸಿದರು.