ತಿರುನಲ್ಲಾರ್ (ತಮಿಳುನಾಡು): “ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗಲಿ ಎಂದು ಪ್ರಾರ್ಥಿಸಲು ಬಂದಿದ್ದೇನೆ. ದೇವರಲ್ಲಿ ಪ್ರಾರ್ಥನೆಗೆ ಇದು ಸೂಕ್ತ ಸಮಯ ಎಂದು ಬಂದಿರುವೆ. ದೇಶ ಹಾಗೂ ರಾಜ್ಯಕ್ಕೆ ಒಳಿತಾಗಲಿ ಎಂದು ಬೇಡಿಕೊಂಡಿರುವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲಾರ್ ಶನೇಶ್ವರ ಸ್ವಾಮಿ ದೇಗುಲದ ಭೇಟಿ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಈ ರೀತಿ ಪ್ರತಿಕ್ರಿಯೆ ನೀಡಿದರು.
ಟಿವಿಕೆ ಜೊತೆಗಿನ ಮೈತ್ರಿ ಬಗ್ಗೆ ಕೇಳಿದಾಗ, “ಜಾತ್ಯಾತೀತ, ಪ್ರಜಾಪ್ರಭುತ್ವ ತತ್ವ ಉಳಿಯಬೇಕು ಎಂದು ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡಿದೆ. ನಾವು ನಮ್ಮ ನಿಲುವಿಗೆ ಬದ್ದವಾಗಿದ್ದೇವೆ” ಎಂದು ಹೇಳಿದರು.

