ಬೆಂಗಳೂರು: ದಿಡೀರ್ ರಾಜಕೀಯ ವಿದ್ಯಮಾನಗಳ ಕಾರಣದಿಂದ ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಇಂದು ರಾತ್ರಿಯೇ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಕೇರಳ ಪ್ರವಾಸದ ನೆಪವೊಡ್ಡಿ ಭೇಟಿಗೆ ರಾಜ್ಯಪಾಲರು ಅನುಮತಿ ನಿರಾಕರಿಸಿದ್ದರೂ, ಅವರನ್ನು ಭೇಟಿ ಮಾಡಿ, 120 ಶಾಸಕರ ಬೆಂಬಲವಿರುವ ಪತ್ರವನ್ನು ರವಾನಿಸುವ ಮೂಲಕ ರಾಜಭವನದಲ್ಲಿಯೇ ಪ್ರಮಾಣವಚನ ಸ್ವೀಕಾರ ಮಾಡಲು ವಿಜಯ್ ತೀರ್ಮಾನಿಸಿದ್ದಾರೆ.
ರಾಜ್ಯಪಾಲರು ನೆಪಗಳ ಮೇಲೆ ನೆಪಗಳನ್ನು ಒಡ್ಡುತ್ತಾ ಸಮಯ ಕಳೆಯುತ್ತಿದ್ದಾರೆ. ವಿಜಯ್ ವಿರುದ್ಧದ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿಯೇ ಇಂತಹ ವಿಳಂಬ ಧೋರಣೆ ನಡೆಸುತ್ತಿದ್ದು, ದಿಡೀರ್ ಪ್ರಮಾಣವಚನ ಸ್ವೀಕಾರ ಮಾಡುವುದು ಒಳಿತು ಎಂಬ ತೀರ್ಮಾನಕ್ಕೆ ವಿಜಯ್ ಬಂದಿದ್ದಾರೆ ಎನ್ನಲಾಗಿದೆ.
ಲೋಕಸಭವನದಲ್ಲಿ ಸಿಎಂ ಆಗಿ ವಿಜಯ್ ಮತ್ತು ಕಾಂಗ್ರೆಸ್‌ನಿಂದ ಒಬ್ಬರು ಡಿಸಿಎಂ ಮತ್ತು ವಿಸಿಕೆಯಿಂದ ಮತ್ತೊಬ್ಬರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

