ಚಿಕ್ಕಬಳ್ಳಾಪುರ: ಇಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಬಾಗೆಪಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆಯ ಮೌನೀಶ್ ಸಾಯಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ.
ಬಿಜಿಎಸ್ ಪಬ್ಲಿಕ್ ಶಾಲೆ ಬಾಗೇಪಲ್ಲಿಯ ಮೌನೀಶ್ ೨೦೨೩-೨೪ ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಶಾಲೆಯ ೬೭ ವಿದ್ಯಾರ್ಥಿಗಳಲ್ಲಿ ೬೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆ ಶೇಕಡಾ ೧೦೦ ರಷ್ಟು ಫಲಿತಾಂಶ ಪಡೆದುಕೊಂಡಿದೆ. ಉತ್ತೀರ್ಣರಾದ ಎಲ್ಲ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಮುನಿರಾಜು ಹಾಗೂ ಸಿಬ್ಬಂದಿ ವರ್ಗ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ,
ಮೌನೀಶ್ ೬೨೫ ಕ್ಕೆ ೬೨೩ ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಆತ ಕನ್ನಡದಲ್ಲಿ ೧೨೫, ಇಂಗ್ಲಿಷ್‌ನಲ್ಲಿ ೯೯, ಹಿಂದಿಯಲ್ಲಿ ೧೦೦, ಗಣಿತದಲ್ಲಿ ೧೦೦, ವಿಜ್ಞಾನದಲ್ಲಿ ೯೯, ಸಮಾಜ ವಿಜ್ಞಾನದಲ್ಲಿ ೧೦೦ ಸೇರಿದಂತೆ ಒಟ್ಟು ೬೨೩ ಗಳನ್ನು ಪಡೆದು, ಶೇಕಡಾ ೯೯.೬೮ ರಷ್ಟು ಅಂಕ ಗಳಿಸಿದ್ದಾನೆ.
ಇನ್ನುಳಿದಂತೆ ಶಾಲೆಯ ವಿದ್ಯಾರ್ಥಿ ಸುಮಂತ್ ಎಚ್. ಎನ್. ೬೦೮ ಅಂಕಗಳನ್ನು ಪಡೆದಿದ್ದರೆ, ಪವನ್ ಹೆಚ್. ಎಸ್ ೬೦೪ ಅಂಕಗಳನ್ನು ಪಡೆದಿದ್ದಾನೆ. ವಿನಯ್ ಕುಮಾರ್. ಎಲ್ ೬೦೧ಅಂಕಗಳನ್ನು ಪಡೆದುಕೊಂಡು ಶಾಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅವರಿಗೆ ಶಾಲೆ ಆಡಳಿತ ಮಂಡಳಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.