ಬೆಂಗಳೂರು: ಬಿಸಿಲ ಬೇಗೆಯಿಂದ ಕಂಗಾಲಾಗಿರುವ ರಾಜಧಾನಿಯ ಜನರಿಗೆ ತಂಪು ನೀಡಲು ವರುಣನ ಆಗಮನವಾಗುತ್ತಿದ್ದು, ಏಪ್ರಿಲ್ 14ರಂದು ರಾಜಧಾನಿಯ ನೆಲ ಮೊದಲ ಮಳೆಯನ್ನು ಕಾಣಲಿದೆ.
ರಾಜ್ಯದ ಹವಾಮಾನ ಇಲಾಖೆ ಪ್ರಕಾರ ಇದೇ ಏಪ್ರಿಲ್ 14 ರಂದು ಬೆಂಗಳೂರಿನಲ್ಲಿ ವರ್ಷದ ಮೊದಲ ಮುಂಗಾರು ಪೂರ್ವ ಮಳೆ ಸುರಿಯಲಿದೆ. ಈಗಾಗಲೇ, ಮುಂಗಾರು ಪೂರ್ವ ಮಳೆಯ ಆರ್ಭಟ ಅರಬ್ಬಿ ಸಮುದ್ರದ ವ್ಯಾಪ್ತಿಯಲ್ಲಿ ಆರಂಭವಾಗಿದೆ. ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಮಳೆಯಾಗುತ್ತಲೂ ಇದೆ.
ಇದೇ ಆಧಾರದಲ್ಲಿ ರಾಜ್ಯದಲ್ಲಿ ಮಳೆಯ ಸಾಧ್ಯತೆಯಿದೆ. ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮಳೆಯಿಂದ ಬಿಸಿಲ ಬೇಗೆಯಲ್ಲಿ ತತ್ತರಿಸಿರುವ ರಾಜಧಾನಿಯ ನೆಲ ಸ್ವಲ್ಪ ತಣ್ಣಗಾಗಲಿದೆ ಎನ್ನಬಹುದು