ಕೊಪ್ಪಳ: ಕನ್ನಡವನ್ನೇ ಓದಲು ಮತ್ತು ಬರೆಯಲು ಬಾರದ ವ್ಯಕ್ತಿಯೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೩ ಅಂಕ ಪಡೆದು, ಸರಕಾರಿ ನೌಕರಿ ಪಡೆದುಕೊಂಡಿರುವ ಕುತೂಹಲಕಾರಿ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಏಳನೇ ತರಗತಿ ಅಂಕಪಟ್ಟಿಯ ಆಧಾರದ ಮೇಲೆ ಎಂಬಾತ ಕೊಪ್ಪಳ ನ್ಯಾಯಾಲಯದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ, ಅನಂತರ ಆತ 2017-18ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾನೆ. ಆ ಪರೀಕ್ಷೆಯಲ್ಲಿ ಆತ 625 ಕ್ಕೆ 623 ಅಂಕ ಪಡೆದಿದ್ದ. ಈ ಅಂಕದ ಆಧಾರದ ಮೇಲೆ ಯಾದಗಿರಿ ನ್ಯಾಯಾಲಯದಲ್ಲಿ ಜವಾನ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿ, ಅದಕ್ಕೂ ಆಯ್ಕೆಯಾಗಿದ್ದ.
ಈ ಹುದ್ದೆಯ ಆಯ್ಕೆ ಪ್ರಕ್ರಿಯೆ ವೇಳೆ ನ್ಯಾಯಾಧೀಶರು ಆತನ ಅಂಕಗಳನ್ನು ಗಮನಿಸಿ, ಇಷ್ಟೊಂದು ಉತ್ತಮ ಅಂಕ ಪಡೆದಿರುವ ವ್ಯಕ್ತಿ, ಜವಾನನ ಹುದ್ದೆಗೆ ಏಕೆ ಬರಬೇಕು? ಮುಂದಿನ ವಿದ್ಯಾಭ್ಯಾಸದ ಮೂಲಕ ಇನ್ನೂ ಉತ್ತಮ ಹುದ್ದೆಗೆ ಹೋಗಬಹುದಲ್ಲ ಎಂಬ ಕಾರಣಕ್ಕೆ ಈ ಬಗ್ಗೆ ವಿಚಾರಣೆ ನಡೆಸಿದರು. ಆಗ ನ್ಯಾಯಾಧೀಶರ ಮುಂದೆ ಹಜಾರಾದ ವ್ಯಕ್ತಿ, ಕನ್ನಡ ಓದಲು ಮತ್ತು ಬರೆಯಲು ತಡಬಡಾಯಿಸಿದ್ದಾನೆ.
ನ್ಯಾಯಾಧೀಶರು ಆತನ ಅಂಕಗಳ ಬಗ್ಗೆ ಅನುಮಾನಗೊಂಡು, ಆತನಿಂದ ದಿನಪತ್ರಿಕೆ ಓದಿಸಿದ್ದಾರೆ. ಆತನಿಗೆ ಕನ್ನಡ ದಿನಪತ್ರಿಕೆಯನ್ನೇ ಸರಿಯಾಗಿ ಓದಲು ಬರಲಿಲ್ಲ. ಹೀಗಾಗಿ, ವಿಚಾರಣೆಗೆ ಆದೇಶ ಮಾಡಿದ ನ್ಯಾಯಾಧೀಶರು ಈತನಿಗೆ ಇಷ್ಟೊಂದು ಅಂಕಗಳು ಬಂಇದ್ದೇಗೆ ಎಂಬುದನ್ನು ತನಿಖೆ ಮಾಡುವಂತೆ ಆದೇಶ ಮಾಡಿದ್ದಾರೆ.
ದೆಹಲಿ ಬೋರ್ಡ್ನಲ್ಲಿ ಪರೀಕ್ಷೆ ಬರೆದು, ಆತ ಪಾಸಾಗಿರುವುದಾಗಿ ತಿಳಿಸಿದ್ದು, ನನ್ನಂತೆಯೇ ನೂರಾರು ಮಂದಿ ದೆಹಲಿ ಬೋರ್ಡ್ನಲ್ಲಿ ಪರೀಕ್ಷೆ ಬರೆದಿದ್ದಾರೆ. ಅವರಿಗೆಲ್ಲರಿಗೂ ನನ್ನಂತೆಯೇ 600 ಕ್ಕೂ ಅಧಿಕ ಅಂಕಗಳು ಬಂದಿವೆ ಎಂದು ತಿಳಿಸಿದ್ದಾನೆ. ಹೆಚ್ಚಿನ ತನಿಖೆಗೆ ಆದೇಶ ಮಾಡಿರುವ ನ್ಯಾಯಾಧೀಶರು, ಈ ರೀತಿ ಆದರೆ, ನಿಜವಾಗಿ ಓದಿ ರ‍್ಯಾಂಕ್ ಗಳಿಸಿದವರಿಗೆ ಅನ್ಯಾಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.