ರಾಜಕೀಯ ಸುದ್ದಿ

ತಮಿಳುನಾಡು ಚುನಾವಣೆ: ಸರಕಾರ ರಚನೆಗೆ ಮತ್ತೇ ವಿಳಂಬ ಮಾಡುತ್ತಿರುವ ಗವರ್ನರ್

Share It

ಬೆಂಗಳೂರು: ತಮಿಳುನಾಡು ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಗವರ್ನರ್ ವಿಳಂಬ ಧೋರಣೆ ಮುಂದುವರಿದಿದ್ದು, ಕೇರಳ ಪ್ರವಾಸದ ನೆಪವೊಡ್ಡಿ ವಿಜಯ್ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದಲೂ ವಿಜಯ್ ಸರಕಾರ ರಚನೆಗೆ ರಾಜ್ಯಪಾಲರ ಮುಂದೆ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಬಹುಮತ ಸಾಭೀತು ಮಾಡುವಂತೆ ತಾಕೀತು ಮಾಡಿದ ರಾಜ್ಯಪಾಲರು, ಇದೀಗ ಹೊಸ ವರಸೆ ತೆಗೆದಿದ್ದಾರೆ.

ಕಾಂಗ್ರೆಸ್ ಮತ್ತು ಟಿವಿಕೆ ಶಾಸಕರ ಬೆಂಬಲದಲ್ಲಿ ಮೊದಲಿಗೆ ಮನವಿ ಮಾಡಿಕೊಂಡಿದ್ದ ವಿಜಯ್‌ಗೆ 118 ಶಾಸಕರ ಸಂಪೂರ್ಣ ಬೆಂಬಲದ ಸಹಿಯೊಂದಿಗೆ ಬರುವಂತೆ ರಾಜ್ಯಪಾಲರು ತಿಳಿಸಿದ್ದರು. ಇದೀಗ ಆ ಎಲ್ಲ ಶಾಸಕರ ಸಹಿ ಪಡೆದಿದ್ದರೂ, ಭೇಟಿಗೆ ಅವಕಾಶ ನೀಡಿಲ್ಲ.

ಟಿವಿಕೆಗೆ ಕಾಂಗ್ರೆಸ್ ಜತೆಗೆ ವಿಸಿಕೆ, ಸಿಪಿಎಂ ಮತ್ತು ಸಿಪಿಐ ಪಕ್ಷಗಳ ಬೆಂಬಲ ಘೋಷಣೆ ಮಾಡಿವೆ. ಈ ಎಲ್ಲ ಪಕ್ಷದ ಶಾಸಕರ ಸಂಖ್ಯೆ ಬಹುಮತ ತಲುಪಲಿದ್ದು, ಸರಕಾರ ರಚನೆಗೆ ರಾಜ್ಯಪಾಲರ ಮುಂದೆ ಹಕ್ಕೊತ್ತಾಯ ಮಾಡಲು ತೆರಳಿದ್ದ ವಿಜಯ್ ಅವರನ್ನು ವಾಪಸ್ ಕಳುಹಿಸಲಾಗಿದೆ.

ಕೇರಳ ಪ್ರವಾಸಕ್ಕೆ ತೆರಳುತ್ತಿರುವ ಕಾರಣ ನೀಡಿದ ರಾಜ್ಯಪಾಲರು ಕೊನೆಯ ಕ್ಷಣದ ಭೇಟಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ರಾಜ್ಯಪಾಲರ ನಡೆ ಅನುಮಾನಕ್ಕೆ ಕಾರಣವಾಗಿದೆ.


Share It

You cannot copy content of this page