ಬೆAಗಳೂರು: ಮಾಜಿ ಸಚಿವ ರೇವಣ್ಣ ಅವರ ಬಂಧನಕ್ಕೆ ಕಾರಣವಾಗಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣ ಹಳ್ಳ ಹಿಡಿಯುವ ಎಲ್ಲ ದಾರಿಗಳು ಕಾಣಿಸುತ್ತಿದ್ದು, ಆಕೆ ನನ್ನ ಕಿಡ್ನಾಪ್ ಆಗಿಯೇ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮಾತನಾಡಿರುವ ಸಂತ್ರಸ್ತೆ, ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ, ಭವಾನಿ ಮೇಡಂ ಆಗಲೀ, ರೇವಣ್ಣ ಸಾಹೇಬರಿಂದಾಗಲೀ ನನಗೆ ಯಾವುದೇ ತೊಂದರೆ ಇಲ್ಲ. ಬಾಬಣ್ಣನೂ ಕೂಡ ಅಷ್ಟೇ, ನನ್ನ ಮಗ ಗೊತ್ತಿಲ್ಲದೆ ದೂರು ನೀಡಿದ್ದಾನೆ ಎಂದು ವಿಡಿಯೋದಲ್ಲಿ ಮಹಿಳೆ ಹೇಳಿದ್ದಾಳೆ.
ಮಹಿಳೆಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆಕೆಯ ಮಗ ಕೆ.ಆರ್.ನಗರ ಪೊಲೀಸರಿಗೆ ದೂರು ನೀಡಿದ್ದ. ನಂತರ ಆಕೆಯನ್ನು ತೋಟದ ಮನೆಯೊಂದರಲ್ಲಿರುವುದನ್ನು ಗುರುತಿಸಿ, ಎಸ್ಐಟಿ ಪೊಲೀಸರು ರಕ್ಷಣೆ ಮಾಡಿದ್ದರು. ವಿಚಾರಣೆ ವೇಳೆ ಆಕೆ ಅನೇಕ ವಿಚಾರಗಳನ್ನು ಪೊಲೀಸರ ಜತೆ ಹಂಚಿಕೊAಡದ್ದಾರೆ ಎಂದು ಹೇಳಲಾಗಿತ್ತು. ಇದೀಗ ಆಕೆಯದ್ದು ಎನ್ನಲಾದ ವಿಡಿಯೋದಲ್ಲಿ ರೇವಣ್ಣ ಸಾಹೇಬ್ರು ನನಗೇನೂ ತೊಂದರೆ ಕೊಟ್ಟಿಲ್ಲ ಎಂದಿರುವುದು ಇದೀಗ ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ ಸಂಪೂರ್ಣವಾಗಿ ರಾಜಕೀಯ ತಿರುವು ಪಡೆದುಕೊಂಡಿದ್ದು, ನಾಟಕೀಯವಾಗಿ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಪೊಲೀಸರ ಕೈಗೆ ಸಿಗದಂತೆ ಪರಾರಿಯಾಗಿದ್ದಾರೆ. ಬ್ಲೂ ಕಾರ್ನರ್ ನೊಟೀಸ್ ನೀಡಿದರೂ, ಪ್ರಯೋಜನವಾಗಿಲ್ಲ. ಇನ್ನು ರೇವಣ್ಣ ಜೈಲಿನಲ್ಲಿದ್ದಾರೆ. ಪೆನ್ ಡ್ರೆöÊವ್ ಹಂಚಿಕೆ ಮಾಡಿದವರ ಬಂಧನವಾಗಿದೆ. ಸದಾ ಆರೋಪ ಮಾಡುತ್ತಲೇ ಇದ್ದ ದೇವರಾಜೇಗೌಡ ಅವರ ಬಂಧನವಾಗಿದೆ.
ಸಂತ್ರಸ್ತೆಯರಲ್ಲಿ ಕೆಲವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ತಮ್ಮ ಮುಂದಿನ ಭವಿಷ್ಯ ಮತ್ತು ಅವಮಾನವನ್ನು ಕಾರಣವಾಗಿ ನೀಡುತ್ತಿದ್ದರೆ, ಮನೆ ಕೆಲಸದಾಕೆ, ರೇವಣ್ಣ ಕುಟುಂಬದಿAದ ನನಗೇನು ತೊಂದರೆ ಇಲ್ಲ ಎಂದು ಹೇಳುವ ಮೂಲಕ ಪ್ರಕರಣ ಹಳ್ಳ ಹಿಡಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಸಂತ್ರಸ್ತೆಯೇ ಹೇಳಿಕೆ ನೀಡಲು ನಿರಾಕರಿಸಿದರೆ, ಪ್ರಕರಣ ಬಹುತೇಕ ದಾರಿ ತಪ್ಪುತ್ತದೆ.
ಪೆನ್ ಡ್ರೆöÊವ್ ಪ್ರಕರಣದಲ್ಲಿಯೂ ಅನೇಕ ರಾಜಕೀಯ ತಿರುವುಗಳು ಎದುರಾಗುತ್ತಿದ್ದು, ಈ ಎಲ್ಲ ರಾಜಕಾರಣವನ್ನು ಹಿಮ್ಮೆಟ್ಟಿ ಅದೇಗೆ ಸಂತ್ರಸ್ತೆಯರಿಗೆ ಪೊಲೀಸರು ನ್ಯಾಯ ಒದಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.