ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆ ಬೀಳಲಿದೆ. ಇನ್ನುಳಿದಂತೆ ತುಮಕೂರು, ವಿಜಯನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಕೋಲಾರ,ದಾವಣಗೆರೆ, ಚಾಮರಾಜನಗರ, ಚಿಕ್ಕಬಳ್ಳಾಪುರದಲ್ಲಿ ಸಾಧಾರಣ ಮಳೆಯಾಗಲಿದೆ.
ಹುಬ್ಬಳ್ಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸುಳ್ಯ, ಹಳಿಯಾಳ, ಸಂಕೇಶ್ವರ, ಜಯಪುರ, ಬೆಳಗಾವಿ ಪಿಟಿಒ, ಕುಕನೂರು, ಮುನಿರಾಬಾದ್, ನಿಪ್ಪಾಣಿ, ಬಂಡೀಪುರ, ಭಾಗಮಂಡಲ, ಪೊನ್ನಂಪೇಟೆ, ಕಿರವತ್ತಿ, ಕೋಟ, ದೇವರಹಿಪ್ಪರಗಿ, ಅಣ್ಣಿಗೆರೆ, ಕಲಘಟಗಿ, ಹಿಡಕಲ್ ಅಣೆಕಟ್ಟು, ಹುಕ್ಕೇರಿ, ಹಗರಿಬೊಮ್ಮನಹಳ್ಳಿ, ಕಳಸ, ಬೇಗೂರು, ವಿರಾಜಪೇಟೆ, ಉಡುಪಿ, ಮುಂಡಗೋಡು, ಪುತ್ತೂರು, ಚಿಕ್ಕೋಡಿ, ಧಾರವಾಡ, ವಿಜಯಪುರ, ಇಂಡಿ, ದೇವದುರ್ಗ, ಕಡೂರು,ಹರಪನಹಳ್ಳಿ, ಬೆಂಗಳೂರಿನಲ್ಲಿ ಮಳೆಯಾಗಿದೆ.
ಇಂದು ಹಾವೇರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಮಂಡ್ಯ, ದಾವಣಗೆರೆ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.