ಅಪರಾಧ ಸುದ್ದಿ

ಇದೇನ್ ಹೊಸದಲ್ಲ, ಸುಮಾರ್ ಕಡೆ ಆಗಿದೆ: ಪರಿಶೀಲನೆ ನಂತರ ಕ್ರಮ : ಪುಟ್ಟರಂಗಶೆಟ್ಟಿ

Share It

ಚಾಮರಾಜನಗರ:ಇಂತಹ ಘಟನೆ ಹೊಸದೇನಲ್ಲ, ಅನೇಕ ಕಡೆಗಳಲ್ಲಿ ಆಗಿವೆ. ಮೂರು ಜನರನ್ನು ಎನ್‌ಕೌಂಟರ್ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸಮಗ್ರ ತನಿಖೆಯ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ನಡೆದಿರುವ ಎನ್‌ಕೌಂಟರ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನಾಲ್ಕು ಜನ ಭೇಟೆಗೆ ಹೋಗಿದ್ದರು, ಅವರನ್ನು ಶರಣಾಗುವಂತೆ ಸೂಚಿಸಿದರೂ, ಗುಂಡಿನ ದಾಳಿ ನಡೆಸಿದರು. ಹೀಗಾಗಿ, ಎನ್‌ಕೌಂಟರ್ ಮಾಡಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಗ್ರಾಮಸ್ಥರು ಹೇಳುತ್ತಿರುವುದೇ ಬೇರೆ ಎಂದಿದ್ದಾರೆ.

ಮೂರು ಜನರ ಸಾವಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳಿಂದ ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುವುದು. ತಪ್ಪ ಯಾರದ್ದೇ ಇದ್ದರೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.


Share It

You cannot copy content of this page