ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಕಾಯ್ದುಕೊಂಡಿದೆ. ಈರುಳ್ಳಿ ರಫ್ತಿನ ಮೇಲಿನ ಸಂಪೂರ್ಣ ನಿಷೇಧ ಹಿಂಪಡೆದಿದ್ದರೂ, ಮತ್ತೆ ಭಾರೀ ರಫ್ತು ಸುಂಕ ವಿಧಿಸಲು ನಿರ್ಧರಿಸಿದೆ.
ಶುಕ್ರವಾರ ಅಧಿಕೃತ ಹೇಳಿಕೆಯಲ್ಲಿ, ಈರುಳ್ಳಿ ರಫ್ತಿನ ಮೇಲೆ ಶೇ.40 ರಷ್ಟು ರಫ್ತು ಸುಂಕವನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇ. 40 ರಷ್ಟು ರಫ್ತು ಸುಂಕ ವಿಧಿಸಲು ಸರ್ಕಾರ ಮೊದಲು ನಿರ್ಧರಿಸಿತು. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ವಿಪರೀತ ಏರಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.
ಈ ಆದೇಶ ಇಂದಿನಿಂದಲೇ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಇದಲ್ಲದೆ ಈರುಳ್ಳಿ ರಫ್ತಿನ ಮೇಲೆ ಶೇ.40 ರಫ್ತು ಸುಂಕ ವಿಧಿಸಲು ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈರುಳ್ಳಿ ಬೆಲೆ 70 ರಿಂದ 80 ರೂ.ಗೆ ತಲುಪಿದಾಗ ಸರಕಾರ ಈರುಳ್ಳಿ ರಫ್ತು ನಿಷೇಧಿಸಿತ್ತು.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಸರ್ಕಾರವು ಮಾರ್ಚ್ 31, 2024 ರವರೆಗೆ ಈರುಳ್ಳಿ ರಫ್ತು ನಿಷೇಧಿಸಿತ್ತು, ಆದರೆ ನಂತರ ಅನೇಕ ದೇಶಗಳ ವಿನಂತಿಗಳ ಆಧಾರದ ಮೇಲೆ ಅದರ ಸಾಗಣೆಯನ್ನು ಅನುಮತಿಸಲಾಯಿತು. ಇದರ ನಂತರ, ಕಳೆದ ತಿಂಗಳು ಸರ್ಕಾರವು ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿತ್ತು.
ರಫ್ತು ನಿಷೇಧದ ಹೆಚ್ಚಳದಿಂದ, ವ್ಯಾಪಾರಿಗಳು ಮತ್ತು ರೈತರು, ವಿಶೇಷವಾಗಿ ಮಹಾರಾಷ್ಟ್ರದ ರೈತರು ರಫ್ತು ನಿಷೇಧ ತೆಗೆದುಹಾಕಲು ವಿನಂತಿಸುತ್ತಿದ್ದಾರೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಇದೀಗ ಮೇ 7 ರಂದು ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನ ನಡೆಯಲಿರುವ ಸಂದರ್ಭದಲ್ಲಿ ಸರ್ಕಾರ ನಿಷೇಧ ಹಿಂಪಡೆದಿದೆ.